

ಹಿರಿಯೂರು: ಪ್ರಾಣದ ಹಂಗು ತೊರೆದು ಕರೊನಾ ವಿರುದ್ಧ ಹೋರಾಡುತ್ತಿರುವ ಆರೋಗ್ಯ-ಪೊಲೀಸ್ ಇಲಾಖೆ ಸಿಬ್ಬಂದಿಯನ್ನು ಎಲ್ಲರೂ ಗೌರವಿಸಬೇಕು ಎಂದು ನ್ಯಾಯಾಧೀಶೆ ದಮಯಂತಿ ಸೋಮಯ್ಯ ಹೇಳಿದರು.
ತಾಲೂಕಿನ ಅಬ್ಬಿನಹೊಳೆ ಪೊಲೀಸ್ ಠಾಣೆ ಸಿಬ್ಬಂದಿಗೆ ಬುಧವಾರ ಹಣ್ಣು ವಿತರಿಸಿ ಮಾತನಾಡಿ, ವೈದ್ಯರು, ಪೊಲೀಸ್ ಹಾಗೂ ಪೌರ ಕಾರ್ಮಿಕರು ಸಮಾಜದ ಆಸ್ತಿ. ಇವರನ್ನು ಎಲ್ಲರೂ ಗೌರವಿಸಬೇಕು ಎಂದರು.
ಎಲ್ಲೆಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸರ್ಕಾರದ ಆದೇಶ ಪಾಲಿಸಿ, ಕರೊನಾ ಯುದ್ಧ ಗೆಲ್ಲಲು ಸಹಕರಿಸಬೇಕು ಎಂದರು.
ನ್ಯಾಯಾಧೀಶರಾದ ಫರಾ ಬೇಗಂ ಸೈಯದ್, ಎನ್.ಬಿ.ಶೇಖ್, ಪಿಎಸ್‌ಐ ಚಂದ್ರಶೇಖರ್, ಸಿಬ್ಬಂದಿಗಳಾದ ಪ್ರತಿಭಾ, ಸಿದ್ದೇಶ್, ನಾಗರಾಜ್, ದಿಲೀಪ್, ಪ್ರವೀಣ್, ಮಾರುತೇಶ್ ಇತರರಿದ್ದರು.