

ಹಿರಿಯೂರು: ಬಯಲು ಸೀಮೆ ರೈತರು ನುಗ್ಗೆ ಗಿಡ ಬೆಳೆದರೆ ಆರ್ಥಿಕವಾಗಿ ಸದೃಢರಾಗಿ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಬಹುದು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು ಹೇಳಿದರು.
ಧಾನ್ ಫೌಂಡೇಷನ್ ಸಹಯೋಗದಲ್ಲಿ ತಾಲೂಕಿನ ಮಲ್ಲೇಣು-ಮಸ್ಕಲ್ ಗ್ರಾಮದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ರೈತರಿಗೆ ನುಗ್ಗೆ ಸಸಿ ವಿತರಿಸಿ ಮಾತನಾಡಿದರು.
ರೈತರು ಜಮೀನಿನ ಬದು, ಮನೆಯ ಸುತ್ತಲಿನ ಜಾಗದಲ್ಲಿ ನುಗ್ಗೆ ಸಸಿ ಬೆಳೆಸಿದರೆ ಲಾಭವಾಗಲಿದೆ. ನುಗ್ಗೆ ಸೊಪ್ಪು, ನುಗ್ಗೆ ಕಾಯಿ ಸೇವನೆ ಉತ್ತಮ ಆರೋಗ್ಯಕ್ಕೆ ನೆರವಾಗಲಿದೆ ಎಂದರು.
ತಾಪಂ ಸದಸ್ಯೆ ಜಯಲಕ್ಷಿ ್ಮ, ಶ್ರೀದೇವಿ, ನಾಗರಾಜ್, ವೆಂಕಟೇಶಪ್ಪ, ರಾಜಪ್ಪ, ಹೇಮಂತ್, ಶ್ರೀನಿವಾಸ್, ಮಹೇಶ್, ಕುಮಾರ್, ಆನಂದ್, ಕೆಪಿಸಿಸಿ ಸದಸ್ಯ ಕಂದಿಕೆರೆ ಸುರೇಶ್ ಬಾಬು ಇತರರಿದ್ದರು.