ಸಕಾಲಕ್ಕೆ ಅಸಲು ಪಾವತಿಸಿದ್ರೆ ಬಡ್ಡಿ ಮನ್ನಾ

HYR pld bank 09
Published on

ಹಿರಿಯೂರು: ರೈತರು ಸಕಾಲಕ್ಕೆ ಅಸಲು ಪಾವತಿಸಿದರೆ ಬಡ್ಡಿ ಮನ್ನಾ ಯೋಜನೆ ಲಾಭ ಸಿಗಲಿದೆ ಎಂದು ಪಿಕಾರ್ಡ್ ಬ್ಯಾಂಕ್ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಕೆ.ಷಡಕ್ಷರಿ ಹೇಳಿದರು.

ನಗರದ ಪಿಎಲ್‌ಡಿ ಬ್ಯಾಂಕ್ ಆಡಳಿತ ಮಂಡಳಿ ಕಚೇರಿಗೆ ಸೋಮವಾರ ಭೇಟಿ ನೀಡಿ ಬ್ಯಾಂಕ್ ಪ್ರಗತಿ ಕುರಿತು ಆಡಳಿತ ಮಂಡಳಿ ಸದಸ್ಯರೊಂದಿಗೆ ಚರ್ಚೆ ನಡೆಸಿದರು.

ರಾಜ್ಯ ಸರ್ಕಾರ ರೈತರಿಗೆ ನೆರವಾಗಲು ಬಡ್ಡಿ ಮನ್ನಾ ಯೋಜನೆ ಜಾರಿಗೆ ತಂದಿದೆ. ರೈತರು ಅಸಲು ಮತ್ತು ಸುಸ್ತಿ ಬಡ್ಡಿ ಶೇ.2ರಷ್ಟು ಹಣವನ್ನು ಮಾ.25 ರೊಳಗೆ ಪಾವತಿಸಿದರೆ ಬಡ್ಡಿ ಮನ್ನಾವಾಗಲಿದೆ. ಅರ್ಹರು ಇದರ ಸದುಪಯೋಗ ಪಡೆದು ಸಾಲದಿಂದ ಋಣಮುಕ್ತರಾಗಬೇಕು ಎಂದು ತಿಳಿಸಿದರು.

ಜಿಲ್ಲಾ ನಿರ್ದೇಶಕ ಎಚ್.ಟಿ.ನಾಗಿರೆಡ್ಡಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಸ್.ಗಿರಿಜಪ್ಪ, ಉಪಾಧ್ಯಕ್ಷ ಎಸ್.ಸಿದ್ದಯ್ಯ, ಕೀರ್ತಿಕುಮಾರಿ, ಪಿ.ಎಸ್.ಸಾದತ್ ಉಲ್ಲಾ, ಎಸ್.ಜೆ.ಹನುಮಂತರಾಯ, ಪಿ.ಎಲ್.ಶಿವಣ್ಣ, ಆರ್.ಶಶಿಧರ್, ಮಂಜ್ಯಾನಾಯ್ಕ, ಬಿ.ಟಿ.ಜಗದೀಶ್, ಎಲ್.ತಿಪ್ಪೇಸ್ವಾಮಿ, ಎ.ಜಿ.ಸಿದ್ದರಾಮೇಶ್ವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net