ಹಿರಿಯೂರಿನಲ್ಲೂ ಜನ್ಮ ದಿನಾಚರಣೆ

HYR Dr raj 24
Published on

ಹಿರಿಯೂರು: ಪರಿಪೂರ್ಣ ವ್ಯಕ್ತಿತ್ವ, ಸರಳ, ಸಜ್ಜನಿಕೆಯ ಪ್ರತಿರೂಪವಾಗಿ ಜೀವನದ ಮೌಲ್ಯಗಳನ್ನು ಯುವ ಸಮೂಹಕ್ಕೆ ತಲುಪಿಸುತ್ತಿರುವ ಡಾ.ರಾಜ್ ಅವರ ಕನ್ನಡದ ಸೇವೆ ಅನನ್ಯ ಎಂದು ಡಾ.ರಾಜ್ ಅಭಿಮಾನಿ ಸಂಘದ ತಾಲೂಕು ಅಧ್ಯಕ್ಷ ಕೇಶವಮೂರ್ತಿ ಹೇಳಿದರು.

ಬಿಇಒ ಕಚೇರಿ ಬಳಿ ಶುಕ್ರವಾರ ಆಯೋಜಿಸಿದ್ದ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆಯಲ್ಲಿ ಮಾತನಾಡಿ, ರಾಜ್‌ಕುಮಾರ್ ಕನ್ನಡಿಗರನ್ನು ಅಗಲಿ ಹಲವು ವರ್ಷಗಳೇ ಉರುಳಿದ್ದರೂ ಜನರಲ್ಲಿ ಅಭಿಮಾನ ಮಾತ್ರ ಕಡಿಮೆಯಾಗಿಲ್ಲ ಎಂದರು.

ಪಿಎಸ್‌ಐ ನಾಗರಾಜ್, ಹುಚ್ಚವ್ವನಹಳ್ಳಿ ಪ್ರಸನ್ನ, ತಿಪ್ಪೇಸ್ವಾಮಿ, ವಿ.ಎಚ್.ರಾಜ್, ಕೃಷ್ಣಮೂರ್ತಿ, ಪಾಪಣ್ಣ, ಮಂಜುನಾಥ್, ಜಗದೀಶ್, ಎ.ರಾಘವೇಂದ್ರ, ರಂಗಣ್ಣ, ನಾಗೇಶ್, ವಿಶ್ವನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net