ಮಹಾಮಾರಿ ತೊಲಗಿಸಲು ಪಣ ತೊಡಿ

HYR BJP 08
Published on

ಹಿರಿಯೂರು: ದೇಶವನ್ನು ಕರೊನಾ ಸಂಕಷ್ಟದಿಂದ ಪಾರು ಮಾಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಶಕ್ತಿ ಮೀರಿ ಶ್ರಮಿಸುತ್ತಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ್ ಹೇಳಿದರು.

ನಗರದ ರೋಟರಿ ಭವನದಲ್ಲಿ ಸಂಸದ ಎ.ನಾರಾಯಣಸ್ವಾಮಿ ಸಹಕಾರದಿಂದ 500 ಆಹಾರ ಧಾನ್ಯದ ಕಿಟ್‌ಗಳನ್ನು ಆಟೋ ಚಾಲಕರು-ಕೂಲಿ ಕಾರ್ಮಿಕರಿಗೆ ವಿತರಿಸಿ ಮಾತನಾಡಿದರು.

ದೇಶದಲ್ಲಿ ಏಕತೆ ಮಂತ್ರ ಜಪಿಸಿ, ಸರ್ಕಾರದ ಲಾಕ್ ಡೌನ್ ನಿಯಮಗಳನ್ನು ಸರ್ವರು ಪಾಲಿಸಿದಾಗ ಮಾತ್ರ ಕರೊನಾ ಸೋಂಕಿನಿಂದ ಪಾರಾಗಲು ಸಾಧ್ಯ ಎಂದರು.

ತಾಪಂ ಸದಸ್ಯ ಯಶವಂತ್, ನಗರಸಭೆ ಸದಸ್ಯೆ ಶಿವರಂಜನಿ, ಮುಖಂಡರಾದ ಹರ್ಷ, ಹಾಲಪ್ಪ, ಎಂ.ಎಸ್.ರಾಘವೇಂದ್ರ, ವೆಂಕಟೇಶ್, ಡಾ.ಶ್ರೀಪತಿ, ಆರಾಧ್ಯ, ಗೋಪಾಲ್, ಶ್ರವಣಗೆರೆ ದಯಾನಂದ್, ದೇವರಾಜ್, ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ದಾದಾಪೀರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net