ಹಿರಿಯೂರಿನಲ್ಲಿ ರಸ್ತೆ ತಡೆಗೆ ಯತ್ನ ವಿಫಲ

HYR AITUC 08
Published on

ಹಿರಿಯೂರು: ವಿವಿಧ ಸಂಘಟನೆಗಳು ಬುಧವಾರ ಕರೆ ನೀಡಿದ್ದ ಭಾರತ್ ಬಂದ್‌ಗೆ ಹಿರಿಯೂರಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ವಿವಿಧ ಕಾರ್ಮಿಕ ಸಂಘಟನೆ-ಅಂಗನವಾಡಿ ಕಾರ್ಯಕರ್ತೆಯರು ನಗರದ ಮುಖ್ಯರಸ್ತೆಯಲ್ಲಿ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ಶಾಲಾ-ಕಾಲೇಜು, ದಿನ ನಿತ್ಯದ ವ್ಯಾಪಾರ, ಆಟೋ, ಬಸ್ ಸಂಚಾರ ಎಂದಿನಂತೆ ಇತ್ತು.

ಬಂಧನ: ಪೊಲೀಸರ ಎಚ್ಚರಿಕೆ ನಡುವೆ ಗಾಂಧಿ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆಗೆ ಯತ್ನಿಸಿದ ಎಐಟಿಯುಸಿ ಮತ್ತು ಅಂಗನವಾಡಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಬಳಿಕ ಬಿಡುಗಡೆ ಮಾಡಿದರು. ಬಂದ್ ಹಿನ್ನೆಲೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ ಮಾಡಲಾಗಿತ್ತು.

ಸಂಘಟಕರಾದ ತಿಪ್ಪಮ್ಮ, ಕೆ.ಟಿ.ಸುಜಾತಾ, ಎಸ್.ಸಿ.ಕುಮಾರ್, ಶ್ರೀನಿವಾಸ್, ಸಾವಿತ್ರಮ್ಮ, ಜಯರಾಮರೆಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net