

ಹಿರಿಯೂರು: ಉತ್ತಮ ಅಂಕಗಳೊಂದಿಗೆ ಜೀವನ ಮೌಲ್ಯ ಅಳವಡಿಸಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳು ಸಮಾಜದ ಆಸ್ತಿಯಾಗಬೇಕು ಎಂದು ನಿವೃತ್ತ ಪ್ರಾಚಾರ್ಯ ಡಾ.ಶಿವಲಿಂಗಪ್ಪ ಹೇಳಿದರು.
ಇಲ್ಲಿನ ವೇದಾವತಿ ನಗರದಲ್ಲಿ ಶುಕ್ರವಾರ ಆರ್‌ಬಿಎನ್ ಮೆಮೋರಿಯಲ್ ಶಾಲೆ ಕಟ್ಟಡ ಉದ್ಘಾಟಿಸಿ ಮಾತನಾಡಿ, ಭವಿಷ್ಯ ಉಜ್ವಲಗೊಳ್ಳಲು ಶಿಕ್ಷಣದಿಂದ ಮಾತ್ರ ಸಾಧ್ಯ. ಈ ಸತ್ಯವನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಂಡು ವಿದ್ಯಾಭ್ಯಾಸದ ಕಡೆ ಗಮನಹರಿಸಬೇಕು ಎಂದರು.
ಜಿಲ್ಲಾ ಶಿಕ್ಷಣಾಧಿಕಾರಿ ಡಿ.ನರಸಿಂಹಪ್ಪ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣದ ಜತೆ ಉತ್ತಮ ಸಂಸ್ಕಾರ, ಮಾನವೀಯ ಮೌಲ್ಯ, ದೇಶ ಭಕ್ತಿ, ನಾಯಕತ್ವ ಗುಣ ಬೆಳೆಸಬೇಕು ಎಂದು ತಿಳಿಸಿದರು.
ಸಂಸ್ಥೆ ಅಧ್ಯಕ್ಷ ಜಿ.ಹನುಮಂತಪ್ಪ, ಪ್ರಾಚಾರ್ಯ ಎಚ್.ಎನ್.ನರಸಿಂಹಯ್ಯ, ಶಿಕ್ಷಣ ಸಂಯೋಜಕ ಶಶಿಧರ್, ವೀರೇಶ್, ಪ್ರಸನ್ನಕುಮಾರ್, ಮಂಜುನಾಥ್, ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಸಿ.ಹೊರಕೇರಪ್ಪ, ಹನುಮಂತರಾಯಪ್ಪ, ಉಮಾದೇವಿ ಇತರರು ಉಪಸ್ಥಿತರಿದ್ದರು.