ನೆರವಿನ ಹಾದಿಯೇ ನಿಜ ಧರ್ಮ

HYR sudhakar 03
Published on

ಹಿರಿಯೂರು: ಸಂಕಷ್ಟದಲ್ಲಿರುವ ಜನರಿಗೆ ನೆರವಿನ ಹಸ್ತ ಚಾಚುವುದು ಮಾನವೀಯ ಧರ್ಮ ಎಂದು ಕಾಗಿನೆಲೆ ಶಾಖಾ ಮಠದ ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ ಹೇಳಿದರು.

ತಾಲೂಕಿನ ಇಕ್ಕನೂರು ಗ್ರಾಮದಲ್ಲಿ ಡಿ.ಸುಧಾಕರ್ ಬಳಗದಿಂದ ಆಯೋಜಿಸಿದ್ದ ಆಹಾರದ ಕಿಟ್ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ದೇಶದಲ್ಲಿ ಲಾಕ್‌ಡೌನ್‌ನಿಂದ ಜನರು ಸಂಕಷ್ಟದಲ್ಲಿದ್ದು, ಜೀವನ ನಿರ್ವಹಣೆ ಕಷ್ಟವಾಗಿದೆ, ಕರೊನಾ ಸಂಕಷ್ಟ ಸಮದಲ್ಲಿ ಜನತೆಗೆ ನೆರವಾಗಲು ಸಂಘ-ಸಂಸ್ಥೆಗಳು ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.

ಮಾಜಿ ಸಚಿವ ಡಿ.ಸುಧಾಕರ್ ಮಾತನಾಡಿ, ಲಾಕ್‌ಡೌನ್‌ನಿಂದ ತಾಲೂಕಿನ ಬಡ ಜನತೆ ಸಂಕಷ್ಟಕ್ಕೆ ಸಿಲುಕಿದ್ದು, ಬಡ ಜನರಿಗೆ ನೆರವಾಗಲು ಕಳೆದ ಎರಡು ತಿಂಗಳಿಂದ ಶಕ್ತಿ ಮೀರಿ ಶ್ರಮಿಸಲಾಗುತ್ತಿದೆ ಎಂದು ತಿಳಿಸಿದರು.

ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು ಮಾತನಾಡಿ, ರಾಜ್ಯ ಸರ್ಕಾರದ ವಿಶೇಷ ಪ್ಯಾಕೇಜ್ ಕೇವಲ ಘೋಷಣೆಗೆ ಸೀಮಿತವಾಗದೆ ಎಲ್ಲ ಅರ್ಹರಿಗೂ ಸಿಗಬೇಕು, ಅಧಿಕಾರಿಗಳು ಜನರ ಸಂಕಷ್ಟ ಆಲಿಸಬೇಕು ಎಂದರು.

ಜಿಪಂ ಸದಸ್ಯರಾದ ಗೀತಾ, ಆರ್.ನಾಗೇಂದ್ರನಾಯ್ಕ, ಪಾಪಣ್ಣ, ಬ್ಲಾಕ್ ಅಧ್ಯಕ್ಷ ಖಾದಿ ರಮೇಶ್, ಮುಖಂಡರಾದ ಸಿದ್ದೇಶ್, ಚಂದ್ರು, ಗೋವಿಂದಪ್ಪ, ಕೋದಂಡರಾಮಯ್ಯ, ಕಾಟಪ್ಪ, ಕೆಪಿಸಿಸಿ ಸದಸ್ಯ ಕಂದಿಕೆರೆ ಸುರೇಶ್‌ಬಾಬು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net