ಜಾತ್ಯತೀತ ತತ್ವವೇ ಕಾಂಗ್ರೆಸ್ ಜೀವಾಳ

HYR congress 23
Published on

ಹಿರಿಯೂರು: ಜಿಲ್ಲಾ ಪಮಚಾಯಿತಿಯಲ್ಲಿ ಪಾರದರ್ಶಕ ಆಡಳಿತಕ್ಕೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ಜಿಪಂ ನೂತನ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು ಹೇಳಿದರು.

ನಗರದ ಕಾಂಗ್ರೆಸ್ ಕಚೇರಿಗೆ ಶನಿವಾರ ಭೇಟಿ ನೀಡಿ ಮಾತನಾಡಿ, ಜಾತ್ಯತೀತ ತತ್ವವೇ ಕಾಂಗ್ರೆಸ್ ಜೀವಾಳ ಎಂದರು.

ಲಾಕ್‌ಡೌನ್‌ನಿಂದ ಗ್ರಾಮೀಣ ಜನ ಸಂಕಷ್ಟದಲ್ಲಿದ್ದು, ಕುಡಿವ ನೀರು ಪೂರೈಕೆ, ಖಾತ್ರಿ ಯೋಜನೆಯ ಪರಿಣಾಮಕಾರಿ ಅನುಷ್ಠಾನ ಹಾಗೂ ಮೂಲ ಸೌಲಭ್ಯ ಕಲ್ಪಿಸಲು ಒತ್ತು ನೀಡಲಾಗುವುದು ಎಂದು ತಿಳಿಸಿದರು.

ಸದಸ್ಯ ಆರ್.ನಾಗೇಂದ್ರನಾಯ್ಕ ಮಾತನಾಡಿ, ಚಿತ್ರದುರ್ಗ ಜಿಲ್ಲೆ ಕಾಂಗ್ರೆಸ್ ಭದ್ರ ಕೋಟೆಯಾಗಿದ್ದು, ಜನರ ಪ್ರೀತಿ ವಿಶ್ವಾಸ ಗಳಿಸಿ ಮತ್ತೆ ಕೇಂದ್ರ-ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ಸದಸ್ಯರಾದ ಗೀತಾ, ಪಾಪಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ತಾಪಂ ಸದಸ್ಯರಾದ ಓಂಕಾರಪ್ಪ, ತಿಪ್ಪಮ್ಮ, ಅಪ್ಪಾಜಿ, ಚಂದ್ರಪ್ಪ, ಮುಕುಂದ್, ನಗರ ಸಭೆ ಸದಸ್ಯರಾದ ಎಂ.ಎಸ್. ಈರ ಲಿಂಗೇಗೌಡ, ಅಜಯ್‌ಕುಮಾರ್, ಬಿ.ಎನ್.ಪ್ರಕಾಶ್, ಜಿ.ಎಸ್.ತಿಪ್ಪೇಸ್ವಾಮಿ, ಚಿತ್ರಜಿತ್ ಯಾದವ್, ಮುಖಂಡರಾದ ಅಶೋಕ್, ಮಹೇಶ್, ಕಲ್ಲಹಟ್ಟಿ ಹರೀಶ್, ಕೆಪಿಸಿಸಿ ಸದಸ್ಯ ಅಮೃತೇಶ್ವರ, ಕಂದಿಕೆರೆ ಸುರೇಶ್ ಬಾಬು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net