

ಹಿರಿಯೂರು: ತಾಲೂಕು ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಶಾಸಕಿ ಕೆ.ಪೂರ್ಣಿಮಾ ಧ್ವಜಾರೋಹಣ ನೆರವೇರಿಸಿದರು.
ಶಾಂತಿ, ಸಹಬಾಳ್ವೆ, ಏಕತೆಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ವಿವಿಧತೆ ದೇಶದ ಶಕ್ತಿ. ಏಕತೆ, ಬಹು ಸಂಸ್ಕೃತಿ, ವಿವಿಧ ಧರ್ಮಗಳನ್ನು ಒಪ್ಪಿಕೊಂಡು ಸಹನೆ-ಶಾಂತಿಯಿಂದ ಬಾಳುವುದು ಇಂದಿನ ಅಗತ್ಯ ಎಂದು ಶಾಸಕರು ಹೇಳಿದರು.
ತಹಸೀಲ್ದಾರ್ ಸತ್ಯನಾರಾಯಣ, ಜಿಪಂ ಸದಸ್ಯರಾದ ಆರ್.ನಾಗೇಂದ್ರನಾಯ್ಕ, ಶಶಿಕಲಾ, ರಾಜೇಶ್ವರಿ, ಗೀತಾ, ನಗರಸಭೆ ಸದಸ್ಯರಾದ ದಾದಾಪೀರ್, ಮಹೇಶ್ ಪಲ್ಲವ, ಶಿವರಂಜನಿ, ತಾಪಂ ಅಧ್ಯಕ್ಷೆ ಲಕ್ಷ್ಮೀದೇವಿ, ಉಪಾಧ್ಯಕ್ಷೆ ಜಯಲಕ್ಷ್ಮಿ, ಸ್ಥಾಯಿ ಸಮಿತಿ ಅಧ್ಯಕ್ಷ ಹನುಮಂತರಾಯಪ್ಪ, ಸದಸ್ಯರಾದ ಓಂಕಾರಪ್ಪ, ಯಶವಂತ್ ಪ್ರಾಚಾರ್ಯ ಡಾ.ಡಿ.ಧರಣೀಂದ್ರಯ್ಯ ಇತರರಿದ್ದರು.
ಸಾಮಾಜಿಕ, ಕಲೆ, ಸಾಹಿತ್ಯ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರನ್ನು ಗೌರವಿಸಲಾಯಿತು. ದಾವಣಗೆರೆ ವಿವಿ ಪದವಿಯಲ್ಲಿ ರ‌್ಯಾಂಕ್ ಗಳಿಸಿದ್ದ ಅಮೃತಲಕ್ಷ್ಮಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಧರ್ಮಪುರ ಗ್ರಾಪಂ ಕಚೇರಿ: ಗ್ರಾಪಂ ಅಧ್ಯಕ್ಷೆ ಇಂದ್ರಮ್ಮ ಧ್ವಜಾರೋಹಣ ನೆರವೇರಿಸಿದರು. ರಂಗನಾಥ್, ಹಾರ್ಡವೇರ್ ಶಿವಣ್ಣ, ಪಿಡಿಒ ಚಿಕ್ಕಣ್ಣ ಇತರರಿದ್ದರು. ಹರಿಯಬ್ಬೆ ಗ್ರಾಪಂ ಆವರಣದಲ್ಲಿ ಅಧ್ಯಕ್ಷ ಬಿ.ಕೆ.ಮಂಜುನಾಥ್ ಧ್ವಜಾರೋಹಣ ನೆರವೇರಿಸಿದರು, ಉಪಾಧ್ಯಕ್ಷೆ ಗಂಗಮ್ಮ, ಸದಸ್ಯರಾದ ಗೋವಿಂದರಾಜ್, ರಮೇಶ್, ಪರಮೇಶ್, ಪಿಡಿಒ ರತ್ನಮಾಲಾ, ಎಚ್.ಡಿ.ಗಂಗಾಧರ್, ದಿನೇಶ್ ಇತರರಿದ್ದರು.