ಇಂದು ಮಂಡಲ ಅಧ್ಯಕ್ಷರ ಪದಗ್ರಹಣ

VISHWANATH V bjp Hyr
Published on

ಹಿರಿಯೂರು: ತಾಲೂಕು ಬಿಜೆಪಿ ಮಂಡಲದ ನಿಯೋಜಿತ ಅಧ್ಯಕ್ಷ ವಿ.ವಿಶ್ವನಾಥ್ ಅವರ ಪದಗ್ರಹಣ ಕಾರ್ಯಕ್ರಮ ಫೆ. 15 ಶನಿವಾರ ರೋಟರಿ ಭವನದಲ್ಲಿ ನಡೆಯಲಿದೆ.

ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ, ಯಾದವ ಮುಖಂಡ ಎನ್.ಆರ್.ಲಕ್ಷ್ಮೀಕಾಂತ್, ಸಂಸದ ಎ.ನಾರಾಯಣಸ್ವಾಮಿ, ವಿಭಾಗೀಯ ಪ್ರಭಾರ ಜಿ.ಎಂ.ಸುರೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಮಾಜಿ ಅಧ್ಯಕ್ಷರಾದ ಕೆ.ಎಸ್.ನವೀನ್, ನರೇಂದ್ರನಾಥ್, ಸಿದ್ದೇಶ್ ಯಾದವ್, ದ್ಯಾಮಣ್ಣ, ಜಿ.ಪ್ರೇಮ್‌ಕುಮಾರ್ ಭಾಗವಹಿಸುವರು.

ಶಾಸಕರ ಗೈರು ಸಾಧ್ಯತೆ: ಪೂರ್ವ ನಿಯೋಜಿತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಶಾಸಕಿ ಕೆ.ಪೂರ್ಣಿಮಾ ಶನಿವಾರ ಮಂಡ್ಯ-ತಮಿಳುನಾಡಿಗೆ ತೆರಳಲಿದ್ದು, ಮಂಡಲ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮಕ್ಕೆ ಗೈರಾಗಲಿದ್ದಾರೆ ಎನ್ನಲಾಗಿದೆ.

ಮುಸುಕಿನ ಗುದ್ದಾಟ: ತಾನು ಸೂಚಿಸಿದ ವ್ಯಕ್ತಿಯನ್ನು ಮಂಡಲ ಅಧ್ಯಕ್ಷರನ್ನಾಗಿ ನೇಮಿಸಿಲ್ಲ ಎಂಬ ಕಾರಣಕ್ಕೆ ಶಾಸಕರು ಮುನಿಸಿಕೊಂಡು, ನೂತನ ಅಧ್ಯಕ್ಷರ ಜತೆ ಅಂತರ ಕಾಯ್ದುಕೊಂಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಕಳೆದ ನಾಲ್ಕೈದು ತಿಂಗಳಿಂದ ತಾಲೂಕು ಬಿಜೆಪಿ ಘಟಕದಲ್ಲಿ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮಕ್ಕೆ ಶಾಸಕರು ಗೈರಾಗಲು ಪ್ರಮುಖ ಕಾರಣ ಎನ್ನಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net