ಹಿರಿಯೂರು ಒಡನಾಟ ಮೆಲುಕು

BC PATIL
Published on

ಹಿರಿಯೂರು: ತಾಲೂಕಿನೊಂದಿಗೆ ನನಗೆ ಅವಿನಾಭಾವ ಸಂಬಂಧವಿದೆ ಎಂದು ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ಇಲ್ಲಿನ ಪ್ರವಾಸಿ ಮಂದಿರ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ರೈತರ ಸಭೆಯಲ್ಲಿ ಮಾತನಾಡಿ, ಹಿರಿಯೂರಿನಲ್ಲಿ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ಐತಿಹಾಸಿಕ ತೇರುಮಲ್ಲೇಶ್ವರ ಸ್ವಾಮಿ ರಥ ನಿರ್ಮಾಣ, ಲಾಠಿ ಚಾರ್ಜ್, ರೌಡಿಗಳನ್ನು ಮಟ್ಟ ಹಾಕಿದ್ದು, ನಾಟಕದಲ್ಲಿ ಅಭಿನಯಿಸಿದ್ದು, ಇಲ್ಲಿನ ಜನರು ತೋರಿದ ಪ್ರೀತಿ ವಿಶ್ವಾಸಕ್ಕೆ ಚಿರಋಣಿ ಎಂದು ನೆನಪುಗಳನ್ನು ಮೆಲುಕು ಹಾಕಿದರು.

ಹಿರಿಯೂರಿನಲ್ಲಿ ಸಿಪಿಐ ಆಗಿ ಸೇವೆ ಸಲ್ಲಿಸಿ, ಬೇರೆಡೆಗೆ ವರ್ಗಾವಣೆಯಾದ ಸಂದರ್ಭದಲ್ಲಿ ನನ್ನ ಕರ್ತವ್ಯ ಮೆಚ್ಚಿ ಅಂದಿನ ಸಚಿವರಾಗಿದ್ದ ಕೆ.ಎಚ್.ರಂಗನಾಥ್ ಅವರು ಮತ್ತೆ ಹಿರಿಯೂರಿಗೆ ವರ್ಗಾವಣೆ ಮಾಡಿಸಿಕೊಂಡು ಜನ ಸೇವೆಗೆ ಅವಕಾಶಕಲ್ಪಿಸಿದ್ದರು ಎಂದು ನೆನೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net