ಜನರಿಗೆ ಪ್ರಾಮಾಣಿಕ, ತ್ವರಿತವಾಗಿ ಸೌಲಭ್ಯ ನೀಡಿ

Hiriyur, Maradihalli, Anganwadi, Lokayukta Police visit, inspection,
Published on

ಐಮಂಗಲ: ಹೋಬಳಿಯ ಮರಡಿಹಳ್ಳಿ ಗ್ರಾಮದ ಸರ್ಕಾರಿ ಸಮುದಾಯ ಆಸ್ಪತ್ರೆ, ಕರ್ನಾಟಕ ಪಬ್ಲಿಕ್ ಶಾಲೆ, ವಿದ್ಯಾರ್ಥಿನಿಲಯ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಲೋಕಾಯುಕ್ತ ಪೊಲೀಸ್ ನಿರೀಕ್ಷಕಿ ಬಿ.ಕೆ.ಲತಾ ಗುರುವಾರ ಭೇಟಿ ನೀಡಿ ಕಡತ ಪರಿಶೀಲನೆ ನಡೆಸಿದರು.

ಬಳಿಕ ಮಾತನಾಡಿ, ಸಾರ್ವಜನಿಕರಿಗೆ ಸರ್ಕಾರಿ ಸೌಲಭ್ಯಗಳನ್ನು ಪ್ರಾಮಾಣಿಕ, ಪಾರದರ್ಶಕ ಮತ್ತು ತ್ವರಿತವಾಗಿ ನೀಡಬೇಕು. ವಸತಿ ನಿಲಯದ ಸುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಕಟ್ಟಡದ ಒಳಭಾಗದಲ್ಲಿ ಛಾವಣಿ ಶಿಥಿಲಗೊಂಡಿದ್ದು, ವಿದ್ಯುತ್ ಸ್ವಿಚ್ ಹಾಳಾಗಿವೆ. ಇದರಿಂದ ಮಕ್ಕಳಿಗೆ ಅಪಾಯ ಉಂಟಾಗುವ ಸಂಭವ ಹೆಚ್ಚಾಗಿದ್ದು, ಕೂಡಲೇ ದುರಸ್ತಿ ಮಾಡಿಸುವಂತೆ ಸೂಚಿದರು.

ಸಿಬ್ಬಂದಿ ಜಿ.ಎನ್.ಸಂತೋಷ್‌ಕುಮಾರ್, ಆರ್.ಟಿ.ಚಂದ್ರಶೇಖರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net