

ಹಿರಿಯೂರು: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ನಿರ್ಗತಿಕರು, ಸ್ಲಂ ನಿವಾಸಿಗಳು, ನಿರಾಶ್ರಿತರು ಹಾಗೂ ಬಡ ಜನತೆಗೆ ನೆರವಾಗಲು ಕೆಎಂಎಫ್ ವತಿಯಿಂದ ಹಾಲು ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ತಹಸೀಲ್ದಾರ್ ಸತ್ಯನಾರಾಯಣ ಹೇಳಿದರು.
ನಗರದ 30-31ನೇ ವಾರ್ಡ್‌ನಲ್ಲಿ ಶುಕ್ರವಾರ ಕೆಎಂಎಫ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಡ ಜನರಿಗೆ ಹಾಲು ವಿತರಣೆಗೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ತಾಲೂಕಿನಲ್ಲಿ ಈವರೆಗೆ ಕರೊನಾ ಪ್ರಕರಣ ಕಂಡು ಬಂದಿಲ್ಲ. ಈ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ತಾಲೂಕು ಆಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಲಾಕ್‌ಡೌನ್ ಅವಧಿ ಮುಗಿಯುವವರೆಗೂ ವಿನಾಕಾರಣ ಮನೆಯಿಂದ ಯಾರೂ ಹೊರ ಬರಬಾರದು. ಸರ್ಕಾರದ ಆದೇಶಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಮನವಿ ಮಾಡಿದರು.
ಪೌರಾಯುಕ್ತ ಶಿವಪ್ರಸಾದ್, ಸುನೀಲ್, ಆನಂದ್ ಇತರರಿದ್ದರು.