

ಹಿರಿಯೂರು: ಶ್ರಮ ಸಂಸ್ಕೃತಿಯ ಪ್ರತೀಕವಾದ ವಲಸೆ ಕಾರ್ಮಿಕರು ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕು ಎಂದು ಭೋವಿ ಮಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಹಿರಿಯೂರು-ಹೊಸದುರ್ಗ ಗಡಿ ಭಾಗದ ಲಕ್ಕಿಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ ಬುಧವಾರ ಭದ್ರಾ ಮೇಲ್ದಂಡೆ ಕಾಮಗಾರಿ ಕಾರ್ಮಿಕರಿಗೆ (ತೆಲಂಗಾಣ ರಾಜ್ಯದ ರಾಮನಂದಪುರಂನ ವಲಸೆ ಕಾರ್ಮಿಕರು) ಆಹಾರದ ಕಿಟ್ ವಿತರಿಸಿ ಮಾತನಾಡಿದರು.
ತೆಲಂಗಾಣ-ಮಹಾರಾಷ್ಟ್ರದ 30 ಕುಟುಂಬಗಳು ಲಾಕ್‌ಡೌನ್ ಸಂಕಷ್ಟಕ್ಕೆ ಸಿಲುಕಿದ್ದು ಭೋವಿ ಗುರುಪೀಠದಿಂದ ನಿತ್ಯ ಬಳಕೆ ವಸ್ತುಗಳು, ಆಹಾರ ಸಾಮಗ್ರಿ ವಿತರಿಸಲಾಯಿತು ಎಂದು ತಿಳಿಸಿದರು.
ಮಠದ ಸಿಇಒ ಗೌನಹಳ್ಳಿ ಗೋವಿಂದಪ್ಪ, ಪತ್ರಕರ್ತ ಎಚ್.ಲಕ್ಷ್ಮಣ, ಮುಖಂಡರಾದ ಮೂಡಲಗಿರಿಯಪ್ಪ, ಕೃಷ್ಣಪ್ಪ, ಶ್ರೀನಿವಾಸ್ ಇತರರಿದ್ದರು.