ಕುಂಬಾರ ಸಮುದಾಯ ಮನವಿ ಸಲಿಕೆ

HYR kumbara 13
Published on

ಹಿರಿಯೂರು: ಕುಂಬಾರ ಸಮುದಾಯಕ್ಕೆ ವಿಶೇಷ ಪ್ಯಾಕೇಜ್ ನೀಡುವಂತೆ ಒತ್ತಾಯಿಸಿ ಕುಂಬಾರ ಸಂಘದ ತಾಲೂಕು ಪದಾಧಿಕಾರಿಗಳು ತಹಸೀಲ್ದಾರ್ ಸತ್ಯನಾರಾಯಣ ಅವರಿಗೆ ಮನವಿ ಸಲ್ಲಿಸಿದರು.

ಸಣ್ಣ ಜಾತಿ-ವರ್ಗದವರಿಗೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಿದ್ದು ಸ್ವಾಗತಾರ್ಹ. ಲಾಕ್‌ಡೌನ್‌ನಿಂದ ಕುಂಬಾರರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಜೀವನ ನಿರ್ವಹಣೆ ಕಷ್ಟವಾಗಿದೆ. ಒಂದು ಕುಟುಂಬಕ್ಕೆ ಕನಿಷ್ಠ 20 ಸಾವಿರ ರೂ. ಸಹಾಯಧನ ನೀಡಬೇಕು ಎಂದು ಮನವಿ ಮಾಡಿದರು.

ಸಂಘದ ಅಧ್ಯಕ್ಷ ಕೇಶವಮೂರ್ತಿ, ಖಜಾಂಚಿ ಸಣ್ಣಭೀಮಣ್ಣ, ಗೋಪಾಲಪ್ಪ, ರಂಗಸ್ವಾಮಿ, ಪ್ರಭಾಕರ್, ಹೆಂಜಾರಪ್ಪ, ಷಣ್ಮುಖ, ತಿಮ್ಮರಾಜ್, ಗೋವಿಂದರಾಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net