ರಾಜಕೀಯ ಸ್ಥಾನಮಾನ ಕಲ್ಪಿಸಲು ಮನವಿ

HYR MLC 08
Published on

ಹಿರಿಯೂರು: ಜೂನ್ ಅಂತ್ಯಕ್ಕೆ ತೆರವಾಗಲಿರುವ ಎಂಎಲ್‌ಸಿ ಸ್ಥಾನ ತಾಲೂಕಿನ ಕಾಡುಗೊಲ್ಲರ ಸಮುದಾಯದವರಿಗೆ ನೀಡಬೇಕು ಎಂದು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲ್ಲಟ್ಟಿ ತಿಪ್ಪೇಸ್ವಾಮಿ ಒತ್ತಾಯಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾಡುಗೊಲ್ಲರ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದರು.

ನಗರಸಭೆ ಸದಸ್ಯ ಚಿತ್ರಜಿತ್ ಯಾದವ್ ಮಾತನಾಡಿ, ಕಾಡುಗೊಲ್ಲ ಸಮುದಾಯ ಕಾಂಗ್ರೆಸ್ ಪಕ್ಷ ಬೆಂಬಲಿಸುತ್ತಿದ್ದು, ಪಕ್ಷದ ಸಂಘಟನೆ, ಅಭಿವೃದ್ಧಿಗೆ ದುಡಿಯುತ್ತಾ ಬಂದಿದೆ. ಕಳೆದ ಬಾರಿಯಂತೆ ಈ ಸಲವೂ ಅವಕಾಶ ನೀಡಲಿ ಎಂದು ಮನವಿ ಮಾಡಿದರು.

ಜಿಪಂ ಸದಸ್ಯ ಪಾಪಣ್ಣ ಮಾತನಾಡಿ, ರಾಜ್ಯದಲ್ಲಿ 50 ಲಕ್ಷಕ್ಕೂ ಅಧಿಕ ಕಾಡುಗೊಲ್ಲ ಸಮುದಾಯದ ಜನರಿದ್ದು, ಚಿತ್ರದುರ್ಗ, ತುಮಕೂರಿನಲ್ಲಿ ಹೆಚ್ಚಾಗಿದ್ದಾರೆ. ನಮ್ಮ ಸಮಾಜದ ಅಭಿವೃದ್ಧಿಗೆ ಒಬ್ಬ ನಾಯಕರನ್ನು ಕಾಂಗ್ರೆಸ್ ಪಕ್ಷ ಕೊಡುಗೆ ನೀಡಬೇಕು ಎಂದರು.

ತಾಲೂಕು ಕಾಡುಗೊಲ್ಲ ಸಂಘದ ಅಧ್ಯಕ್ಷ ಮ್ಯಾಕ್ಲೂರಹಳ್ಳಿ ರಂಗಪ್ಪ, ಹಿರಿಯ ಮುಖಂಡ ಎಸ್.ಆರ್.ತಿಪ್ಪೇಸ್ವಾಮಿ, ಇಂದಿರಾಗಾಂಧಿ ಯುವ ವೇದಿಕೆ ಅಧ್ಯಕ್ಷ ಮಾಯಸಂದ್ರ ರಂಗಪ್ಪ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net