ಪ್ರತಿಭೆ ಗುರುತಿಸುವವನೇ ನಿಜ ಶಿಕ್ಷಕ

HYR Rotary 19
Published on

ಹಿರಿಯೂರು: ಶಿಕ್ಷಕರು ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿಸುವ ಜವಾಬ್ದಾರಿ ಅರಿತು ವೃತ್ತಿಯ ಗೌರವ ಕಾಪಾಡಬೇಕು ಎಂದು ನ್ಯಾಯಾಧೀಶೆ ದಮಯಂತಿ ಸೋಮಯ್ಯ ಹೇಳಿದರು.

ನಗರದ ರೋಟರಿ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಸರ್ಕಾರಿ ಶಾಲೆಗಳಿಗೆ ಪೀಠೋಪಕರಣ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹೊರತೆಗೆಯುವವನೇ ನಿಜವಾದ ಶಿಕ್ಷಕ. ಗುರುಗಳಾದವರು ಶಿಸ್ತು, ಸಮಯ ಪ್ರಜ್ಞೆ ಅಳವಡಿಸಿಕೊಂಡು ವಿದ್ಯಾರ್ಥಿಗಳ ಬದುಕಿಗೆ ಮಾದರಿಯಾಗಬೇಕು ಎಂದರು.

ರೋಟರಿ ಅಧ್ಯಕ್ಷ ಪ್ರಶಾಂತ್ ಮಾತನಾಡಿ, ರೋಟರಿ ಸಂಸ್ಥೆ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡುತ್ತಿದ್ದು, ಶಿಕ್ಷಕರು ದೇಶ ಕಟ್ಟುವ ಶಿಲ್ಪಿಗಳು. ಯಾವುದೇ ದೇಶ ಅಭಿವೃದ್ಧಿ ಹೊಂದಿದೆ ಎಂದರೆ ಅದಕ್ಕೆ ಅಲ್ಲಿನ ಶಿಕ್ಷಕರ ಪ್ರಾಮಾಣಿಕತೆ ಕಾರಣ. ಹೀಗಾಗಿ ಸಮಾಜ ತಿದ್ದುವ ಗುರುತರ ಹೊಣೆ ಗುರುಗಳ ಮೇಲೆಯೇ ಇದೆ ಎಂದರು.

ತಾಲೂಕಿನ 58 ಸರ್ಕಾರಿ ಶಾಲೆಗಳ ಉತ್ತಮ ಶಿಕ್ಷಕರಿಗೆ ನೇಷನ್ ಬಿಲ್ಡರ್ಸ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನ್ಯಾಯಾಧೀಶ ಎನ್.ಬಿ.ಶೇಖ್, ಡಿವೈಎಸ್ಪಿ ರಮೇಶ್, ಎಚ್.ಎಂ.ಬಸವರಾಜ್, ನಾಗೇಶ್, ಚಂದ್ರಕೀರ್ತಿ, ಆನಂದ್ ಶ್ರೇಷ್ಠಿ, ಜಗದೀಶ್ ದಾರೇದಾರ್, ಮಧುಸೂದನ್, ಸಣ್ಣ ಭೀಮಣ್ಣ, ಕಿರಣ್‌ಕುಮಾರ್, ನಾಗರಾಜ್, ಸುಂದರ್ ರಾಜ್, ಎಂ.ಎಸ್.ರಾಘವೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net