ಪವದಿಯಮ್ಮ ದೇವಿ ಜಾತ್ರೋತ್ಸವ

HYR PAVADIYAMMA jatre 05
Published on

ಹಿರಿಯೂರು: ಇಲ್ಲಿನ ಶ್ರೀ ಪವದಿಯಮ್ಮ ದೇವಿ ಜಾತ್ರಾ ಮಹೋತ್ಸವ ಬುಧವಾರ ಸಂಜೆ ವಿಜೃಂಭಣೆಯಿಂದ ಜರುಗಿತು. ಪರಿಷೆ ನಿಮಿತ್ತ ದೇವಿಗೆ ಅರ್ಚನೆ, ಅಭಿಷೇಕ, ಅಲಂಕಾರ, ಹೋಮ-ಹವನ, ಗಂಗಾಪೂಜೆ ಇತರ ಧಾರ್ಮಿಕ ಕಾರ್ಯಗಳು ನೆರವೇರಿದವು.

ನೂರಾರು ಮಹಿಳೆಯರು ದೊಡ್ಡ ತಟ್ಟೆಯಲ್ಲಿ ಅಕ್ಕಿ ತಂಬಿಟ್ಟಿನ ಆರತಿ, ಕಾಯಿ, ಹೂವು, ಬಾಳೆಹಣ್ಣು ತಂದು ದೇವಿಗೆ ಅರ್ಪಿಸಿ ಸಮೃದ್ಧ ಮಳೆ ಬೆಳೆ, ಬದುಕಿನ ಸುಖ ಶಾಂತಿಗಾಗಿ ಪ್ರಾರ್ಥಿಸಿದರು.

ಅನ್ನ ಸಂತರ್ಪಣೆ, ಉತ್ಸವ ಮೂರ್ತಿ ಮೆರವಣಿಗೆ, ವಿದ್ಯುತ್ ದೀಪಾಲಂಕಾರ ಸೇವೆ, ಕೋಲಾಟ, ಡೊಳ್ಳು ಕುಣಿತ ಇತರ ಧಾರ್ಮಿಕ -ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net