

ಹಿರಿಯೂರು: ನಗರದ ನಿವಾಸಿ, 29 ವರ್ಷದ ಮಹಿಳೆಗೆ ಶನಿವಾರ ಕರೊನಾ ಪಾಸಿಟಿವ್ ದೃಢಪಟ್ಟಿದ್ದು, ತಾಯಿಯ ಸಂಪರ್ಕದಲ್ಲಿದ್ದ 8 ವರ್ಷದ ಮಗುವಿಗೆ ಸೋಂಕು ತಗಲಿದೆ.
ಆರೋಗ್ಯ ತಪಾಸಣೆಗಾಗಿ ಬೆಂಗಳೂರಿಗೆ ಹೋಗಿ ಬಂದಿದ್ದ ಮಹಿಳೆಗೆ ಶನಿವಾರ ಕರೊನಾ ಪಾಸಿಟಿವ್ ದೃಢಪಟ್ಟಿತ್ತು. ಆಕೆಯ ಸಂಪರ್ಕದಲ್ಲಿದ್ದ ಮಗು, ಗಂಡನ ಗಂಟಲು ದ್ರವ ತೆಗೆದುಕೊಂಡು ಪರೀಕ್ಷೆಗೆ ಒಳಪಡಿಸಲಾಗಿತ್ತು.
ಭಾನುವಾರ ಬಂದ ವರದಿಯಲ್ಲಿ ಗಂಡನಿಗೆ ನೆಗಟಿವ್ ಬಂದಿದ್ದು, 8 ವರ್ಷದ ಮಗುವಿಗೆ ಸೋಂಕು ದೃಢಪಟ್ಟಿದೆ. ಆ ಮಗುವನ್ನು ಚಿತ್ರದುರ್ಗ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಗಂಡನನ್ನು ಧರ್ಮಪುರ ಕೋವಿಡ್ ಸೆಂಟರ್‌ನಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ಮಹಿಳೆ ಆರೋಗ್ಯ ತಪಾಸಣೆಗೆ ಒಳಗಾಗದ ಖಾಸಗಿ ಆಸ್ಪತ್ರೆಯ ವೈದ್ಯ, ಮೂವರು ಆರೋಗ್ಯ ಸಿಬ್ಬಂದಿಯ ಸ್ಯಾಂಪಲ್ ಪಡೆದು ಟೆಸ್ಟ್‌ಗೆ ಕಳುಹಿಸಲಾಗಿದೆ. ಆಕೆಯ ಸಂಪರ್ಕದಲ್ಲಿದ್ದ ಇನ್ನು ಕೆಲವರನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ತಿಳಿಸಿದ್ದಾರೆ.