

ಹಿರಿಯೂರು: ಕೃಷಿ ಕ್ಷೇತ್ರವನ್ನು ಪುನರ್ ಚೈತನ್ಯಗೊಳಿಸಿ, ರೈತ ಸ್ನೇಹಿ ಯೋಜನೆ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ರೈತರ ಸಭೆಯಲ್ಲಿ ಮಾತನಾಡಿ, ಮುಂದಿನ ರಾಜ್ಯ ಬಜೆಟ್‌ನಲ್ಲಿ ರೈತಪರ ಯೋಜನೆ ಅನುಷ್ಠಾನ, ಕೃಷಿ ಕ್ಷೇತ್ರದ ಸುಧಾರಣೆಗೆ ವಿಶೇಷ ಆದ್ಯತೆ ನೀಡಲಾಗುವುದು.ಬಿಎಸ್‌ವೈ ನೇತೃತ್ವದಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಕೃಷಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ರೈತ ಮುಖಂಡರು, ಕೃಷಿಕ ಸಮಾಜದ ಅಧ್ಯಕ್ಷರ ಜತೆ ಚರ್ಚಿಸಿದ್ದೇನೆ ಎಂದರು.
ರೈತರ ಬೇಡಿಕೆಗಳು: ಹಿರಿಯೂರನ್ನು ಬರ ಪೀಡಿತ ಪಟ್ಟಿಗೆ ಸೇರ್ಪಡೆ ಮಾಡುವುದು, ಕಡಲೆ-ಶೇಂಗಾಕ್ಕೆ ಬೆಂಬಲ ಬೆಲೆ ಘೋಷಣೆ, ಮಧ್ಯ ಕರ್ನಾಟಕದ ರೈತರ ಅನುಕೂಲಕ್ಕೆ ತೋಟಗಾರಿಕಾ ವಿವಿ ಆರಂಭ, ಕೃಷಿ ಇಂಜಿನಿಯರ್ ಕಾಲೇಜ್ ಸ್ಥಾಪನೆ ಇತರ ಬೇಡಿಕೆಗಳ ಬಗ್ಗೆ ರೈತರು ಸಚಿವರಿಗೆ ಮನವಿ ಸಲ್ಲಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ್, ನಗರ ಸಭೆ ಮಾಜಿ ಅಧ್ಯಕ್ಷ ಟಿ.ಚಂದ್ರಶೇಖರ್, ಮುಖಂಡರಾದ ಎಂ.ಎಸ್.ರಾಘವೇಂದ್ರ, ಜಿ.ಪ್ರೇಮ್‌ಕುಮಾರ್, ಎ.ರಾಘವೇಂದ್ರ, ಹರ್ಷ, ರೈತರ ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ, ನಿರಂಜನಮೂರ್ತಿ, ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್.ತಿಮ್ಮಯ್ಯ, ಆಲೂರು ಶಿವಕುಮಾರ್, ಕೃಷಿ ಅಧಿಕಾರಿ ಸದಾಶಿವ, ಉಲ್ಫತ್ ಜೈಬಾ, ಉಷಾದೇವಿ, ಪ್ರಭಾಕರ್ ಇತರರಿದ್ದರು.