ಧರ್ಮಪುರದಲ್ಲಿ ಉತ್ತಮ ಮಳೆ

HYR rain 26
Published on

ಹಿರಿಯೂರು: ತಾಲೂಕಿನ ಧರ್ಮಪುರ ಹೋಬಳಿ ವಿವಿಧೆಡೆ ಗುರುವಾರ ರಾತ್ರಿ ಉತ್ತಮ ಮಳೆಯಾಗಿದ್ದು, ಹಳ್ಳ-ಕೊಳ್ಳಗಳಿಗೆ ಜೀವ ಕಳೆ ಬಂದಿದೆ.

ಮುಂಗಾರು ಆರಂಭದಲ್ಲಿ ಶೇ.30ರಷ್ಟು ಪ್ರದೇಶದಲ್ಲಿ ಬಿತ್ತನೆ ಮಾಡಿದ್ದ ಶೇಂಗಾ, ತೊಗರಿ, ಸೂರ್ಯಕಾಂತಿ ಇತರೆ ಬೆಳೆಗಳು ತೇವಾಂಶ ಕೊರತೆಯಿಂದ ಮೊಳಕೆ ಬರುವ ವೇಳೆ ಬಾಡುವ ಹಂತ ತಲುಪಿದ್ದವು.

ಸದ್ಯ ವರುಣ ಕೃಪೆ ತೋರಿದ್ದು, ಅನ್ನದಾತರ ಮೊಗದಲ್ಲಿ ಸಂತಸ ಮೂಡಿಸಿದೆ. ಮದ್ದಿಹಳ್ಳಿ, ಹಲಗಲದ್ದಿ, ಖಂಡೇನಹಳ್ಳಿ, ಪಾಳ್ಯ, ಬಿ.ಕೆ.ಹಟ್ಟಿ. ಹೊಸಕೆರೆ, ಪಿ.ಡಿ.ಕೋಟೆ, ಅರಳಿಕೆರೆ, ಬೇತೂರು ಇತರೆಡೆ ಮಳೆ ಸುರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net