7ರಿಂದ ವೀರಭದ್ರ ಸ್ವಾಮಿ ಜಾತ್ರೋತ್ಸವ

HYR veerabhadra swamy 03
Published on

ಹಿರಿಯೂರು: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ವೀರಭದ್ರಸ್ವಾಮಿ ಮತ್ತು ಭದ್ರಕಾಳೇಶ್ವರಿ ದೇವಿ ಜಾತ್ರೋತ್ಸವ ಮಾ.7 ರಿಂದ 11 ವರೆಗೆ ನಡೆಯಲಿದೆ.

ಮಾ.7 ರಂದು ಮಹಾರುದ್ರಾಭಿಷೇಕ, ಕಂಕಣ ಕಲ್ಯಾಣೋತ್ಸವ, ಮಾ.8ಕ್ಕೆ ದೇವರಿಗೆ ವಿಶೇಷ ಅಲಂಕಾರ, ಅಭಿಷೇಕ, ಮಹಾಮಂಗಳಾರತಿ. ಮಾ.9 ರಂದು ದೊಡ್ಡ ಉತ್ಸವ, ದೀಪೋತ್ಸವ, ಗುಗ್ಗಳೋತ್ಸವ, ಅಗ್ನಿಕುಂಡ ಸೇವೆ ಜರುಗಲಿದೆ.

ಮಾ.10ರ ಮಧ್ಯಾಹ್ನ 12.30ಕ್ಕೆ ಶ್ರೀಸ್ವಾಮಿ ರಥೋತ್ಸವ, ಓಕಳಿ ಪಾರ್ವಟೋತ್ಸವ, ಮಾ.11 ರಂದು ಕಂಕಣ ವಿಸರ್ಜನೆ, ಅರ್ಚನೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಇತರ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ ಎಂದು ದೇವಸ್ಥಾನ ಸೇವಾ ಸಮಿತಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net