

ಹಿರಿಯೂರು: ಇಲ್ಲಿನ ಐತಿಹಾಸಿಕ ತೇರುಮಲ್ಲೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಶುಕ್ರವಾರ ಸಾಮೂಹಿಕ ಶಿವ ನಮಸ್ಕಾರ ನಡೆಯಿತು.
ಪತಂಜಲಿ ಯೋಗ ಶಿಕ್ಷಣ ಸಮಿತಿ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪರಶಿವನಿಗೆ ಯೋಗದ ಮೂಲಕ ನಮನ ಸಲ್ಲಿಸಲಾಯಿತು.
ಜಿಪಂ ಸದಸ್ಯ ಆರ್.ನಾಗೇಂದ್ರನಾಯ್ಕ ಮಾತನಾಡಿ, ಯೋಗ ಸಂಸ್ಕೃತಿ ಇಡೀ ವಿಶ್ವಕ್ಕೆ ಭಾರತ ನೀಡಿದ ಅದ್ಭುತ ಕೊಡುಗೆ. ದೈಹಿಕ, ಮಾನಸಿಕ, ಭಾವನಾತ್ಮಕ, ಆಧ್ಯಾತ್ಮಿಕ ಉನ್ನತಿಗೆ ಯೋಗ ಸಹಕಾರಿಯಾಗಿದೆ ಎಂದರು.
ಪತಂಜಲಿ ಯೋಗ ಶಿಕ್ಷಣ ಸಮಿತಿ ಸದಸ್ಯರು ದಕ್ಷಿಣ ನಮಸ್ಕಾರ, ಏಕಪಾದ ಆಸನ ಸೇರಿ 11 ಆಸನಗಳನ್ನು ಪ್ರದರ್ಶಿಸಿದರು.
ತಹಸೀಲ್ದಾರ್ ಸತ್ಯನಾರಾಯಣ, ಪತಂಜಲಿ ಯೋಗಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಪರಮೇಶ್ವರಪ್ಪ, ಎ.ಕುಮಾರ್, ಕೃಷ್ಣಮೂರ್ತಿ, ಶೇಷಾದ್ರಿ, ಯೋಗೀಶ್, ಪ್ರಭಾಕರ್ ಜನಾರ್ದನಗುಪ್ತ, ಭುವನೇಶ್ವರ್, ಉಮೇಶ್, ನಾಗರಾಜ್, ಪದ್ಮಜಾ ಮಹಾಬಲೇಶ್, ಸಾವಿತ್ರಮ್ಮ, ಉಷಾ, ಕೃಷ್ಣಮೂರ್ತಿ, ದೇವರಾಜಮೂರ್ತಿ, ಚಂದ್ರಕಾಂತ್, ವಿಶ್ವನಾಥ್ ಆಚಾರ್ ಇತರರಿದ್ದರು.