ಕರ್ಮಭೂಮಿಯಲ್ಲಿ ಅಂತ್ಯಕ್ರಿಯೆ

HYR DM 2
Published on

ಹಿರಿಯೂರು: ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನ ಹೊಂದಿದ್ದ ಮಾಜಿ ಸಚಿವ ಡಿ.ಮಂಜುನಾಥ್ ಅವರ ಅಂತ್ಯಸಂಸ್ಕಾರ ತಾಲೂಕಿನ ಜೆ.ಜಿ.ಹಳ್ಳಿ ಹೋಬಳಿ ಗಾಯತ್ರಿಪುರ ತೋಟದ ಜಮೀನಿನಲ್ಲಿ ಸರ್ಕಾರಿ ಗೌರವಗಳೊಂದಿಗೆ ಮಂಗಳವಾರ ಸಂಜೆ ನಡೆಯಿತು.

ಬೆಂಗಳೂರಿನಿಂದ ಆಗಮಿಸಿದ ಪಾರ್ಥಿವ ಶರೀರವನ್ನು ನಗರದ ಹೃದಯ ಭಾಗದಲ್ಲಿರುವ ನೆಹರು ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಅಂತಿರ್ಮ ದರ್ಶನ ಪಡೆದರು.

ಶ್ರೀ ಶಿವಮೂರ್ತಿ ಮುರುಘಾ ಶರಣರು, ಶ್ರೀ ಷಡಕ್ಷರ ಮುನಿ ಸ್ವಾಮೀಜಿ, ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ, ಶಾಸಕರಾದ ಕೆ.ಪೂರ್ಣಿಮ, ಜಿ.ಎಚ್.ತಿಪ್ಪಾರೆಡ್ಡಿ, ಟಿ.ರಘುಮೂರ್ತಿ, ಮಾಜಿ ಶಾಸಕರಾದ ಮಸ್ಕಲ್ ರಾಮಯ್ಯ, ತಿಮ್ಮರಾಯಪ್ಪ, ಎಚ್.ಎಸ್.ಶಿವಶಂಕರ್, ಎ.ವಿ.ಉಮಾಪತಿ, ಮಾಜಿ ಸಚಿವರಾದ ಡಿ.ಸುಧಾಕರ್, ಎಚ್.ಏಕಾಂತಯ್ಯ, ಎನ್.ಎಂ.ನಬೀ, ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ಎಸ್ಪಿ ಜಿ.ರಾಧಿಕಾ, ಸಂಸದ ಎ.ನಾರಾಯಣಸ್ವಾಮಿ, ತಹಸೀಲ್ದಾರ್ ಸತ್ಯನಾರಾಯಣ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ಯಶೋಧರ, ತಾಪಂ ಮಾಜಿ ಸದಸ್ಯ ಎಂ.ಡಿ.ರವಿ, ದಲಿತ ಮುಖಂಡ ಗುರುಶಾಮಯ್ಯ ಅನೇಕರು ಅಂತಿಮ ದರ್ಶನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net