ಜನರ ಪ್ರೀತಿ, ವಿಶ್ವಾಸವೇ ಶ್ರೀರಕ್ಷೆ

HYR sudhakar 29
Published on

ಹಿರಿಯೂರು: ಕ್ಷೇತ್ರದ ಜನರ ಪ್ರೀತಿ, ವಿಶ್ವಾಸವೇ ನನಗೆ ಶ್ರೀರಕ್ಷೆ ಎಂದು ಮಾಜಿ ಸಚಿವ ಡಿ.ಸುಧಾಕರ್ ಹೇಳಿದರು.

ತಾಲೂಕಿನ ಧರ್ಮಪುರ ಹೋಬಳಿಯ ವಿವಿಧೆಡೆ ಬಡ ಜನ, ಕೂಲಿ ಕಾರ್ಮಿಕರಿಗೆ ದಿನಸಿ ಕಿಟ್ ತರಕಾರಿ ವಿತರಿಸಿ ಮಾತನಾಡಿದರು.

ತಾಲೂಕಿನ ಮತದಾರರ ಬೆಂಬಲದಿಂದ ಎರಡು ಬಾರಿ ಶಾಸಕನಾಗಿ, ಜನರ ಸೇವೆ ಮಾಡಲು ಅವಕಾಶ ಸಿಕ್ಕಿದೆ. ಅಧಿಕಾರ ಇರಲಿ, ಬಿಡಲಿ ಜನಸಾಮಾನ್ಯರ ಕಷ್ಟ-ಸುಖದಲ್ಲಿ ನೆರವಾಗುವುದು ಮಾನವೀಯತೆ, ಕಷ್ಟ ಎಂದು ಬಂದವರಿಗೆ ನನ್ನ ಶಕ್ತಿ ಮೀರಿ ಸಹಾಯ ಮಾಡಲಾಗಿದೆ ಎಂದರು.

ಜಿಲ್ಲಾಡಳಿತ, ವೈದ್ಯಕೀಯ ಸಿಬ್ಬಂದಿ, ಪೌರ ಕಾರ್ಮಿಕರು, ಸ್ಥಳೀಯ ಗ್ರಾಪಂ ಸಿಬ್ಬಂದಿಯ ಶ್ರಮದಿಂದ ಚಿತ್ರದುರ್ಗ ಜಿಲ್ಲೆ ಕರೊನಾ ಸೋಂಕಿನಿಂದ ಮುಕ್ತವಾಗಿ, ಗ್ರೀನ್ ಝೋನ್‌ನಲ್ಲಿದೆ. ಜನತೆ ಸರ್ಕಾರದ ನಿರ್ದೇಶನ ಪಾಲಿಸಿ ಸಾಮಾಜಿಕ ಅಂತರದ ಮೂಲಕ ಕರೊನಾ ಸೋಂಕು ತಡೆಗೆ ಸಹಕರಿಸಬೇಕು ಎಂದು ತಿಳಿಸಿದರು.

ತಾಪಂ ಮಾಜಿ ಅಧ್ಯಕ್ಷ ವೆಂಕಟೇಶಪ್ಪ, ಕೆಪಿಸಿಸಿ ಸದಸ್ಯ ಕಂದಿಕೆರೆ ಸುರೇಶ್ ಬಾಬು, ಪ್ರದೀಪ್, ಜನಾರ್ಧನ್, ಗೋವಿಂದರಾಜ್, ಹೆಂಜಾರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net