ಕೃಷಿ ಉತ್ಪನ್ನ ಸಾಗಣೆಗೆ ಅವಕಾಶ ಕಲ್ಪಿಸಿ

HYR krushi 29
Published on

ಹಿರಿಯೂರು: ಕರೊನಾ ವೈರಸ್ ಎಫೆಕ್ಟ್ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ಅನ್ನದಾತರಿಗೂ ತಟ್ಟಿದ್ದು, ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆ ಸಾಗಿಸಲಾಗದೇ ಪರದಾಡುತ್ತಿದ್ದಾರೆ.

ತಾಲೂಕಿನ ವಿವಿಧೆಡೆ ರೈತರು ತರಕಾರಿ ಗಿಡ ನಾಟಿ ಮಾಡಿದ್ದು, ಕಟಾವಿಗೆ ಬಂದಿರುವ ಹಣ್ಣು-ತರಕಾರಿಗಳು ಹೊಲದಲ್ಲಿಯೇ ಕೊಳೆಯುತ್ತಿವೆ.

ಪಾಸ್ ಗೊಂದಲ: ರೈತರು ಬೆಳೆದ ತರಕಾರಿ, ಹೂವು-ಹಣ್ಣುಗಳನ್ನು ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗುತ್ತಿಲ್ಲ, ಎಪಿಎಂಸಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ಪಾಸ್ ಅವಶ್ಯವಾಗಿದ್ದು, ಚೆಕ್ ಪೋಸ್ಟ್‌ಗಳಲ್ಲಿ ಪಾಸ್ ಇದ್ದರೆ ಮಾತ್ರ ಮಾರುಕಟ್ಟೆಗೆ ತೆರಳಲು ಪೊಲೀಸರು ಅವಕಾಶ ನೀಡುತ್ತಿದ್ದಾರೆ. ಕೃಷಿ ಉತ್ಪನ್ನ ಸಾಗಿಸಲು ಪಾಸ್ ಅವಶ್ಯವಿಲ್ಲ ಎಂದು ತಾಲೂಕು ಆಡಳಿತ ಹೇಳಿದರೆ, ಪೊಲೀಸರು ಮಾತ್ರ ಪಾಸ್ ಇದ್ದರೆ ಪ್ರವೇಶ ಎನ್ನುತ್ತಿರುವುದು ಅನ್ನದಾತರನ್ನು ಸಂಕಷ್ಟಕ್ಕೆ ದೂಡಿದೆ.

ನಾಲ್ಕು ಎಕರೆ ಪ್ರದೇಶದಲ್ಲಿ ಕರ್ಬೂಜ ಹಣ್ಣು ಕಟಾವಿಗೆ ಬಂದಿದೆ. ಲಾಕ್‌ಡೌನ್ ಪರಿಣಾಮ ಖರೀದಿದಾರರು ಬರುತ್ತಿಲ್ಲ. ಮಾರುಕಟ್ಟೆಗೆ ಸಾಗಿಸಲು ಅವಕಾಶ ಇಲ್ಲ. ಲಕ್ಷಾಂತರ ರೂ. ನಷ್ಟವಾಗಿದೆ, ಹಣ್ಣು ಕೊಳೆತು ಹಾಳಾಗುತ್ತಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ ಮದ್ದಿಹಳ್ಳಿ ರೈತ ಈರಕ್ಯಾತಪ್ಪ.

ಸಿಲಿಂಡರ್ ಕೊರತೆ: ಗ್ಯಾಸ್ ಏಜೆನ್ಸಿಗಳು ಗ್ರಾಮೀಣ ಭಾಗಕ್ಕೆ ಸಿಲಿಂಡ್ ಪೂರೈಕೆ ಮಾಡಲು ಆಸಕ್ತಿ ತೋರುತ್ತಿಲ್ಲ. ಇದರಿಂದ ಜನರು ಪರದಾಡುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net