

ಹಿರಿಯೂರು: ರೋಗ ಮುಕ್ತ ಸಮಾಜ ನಿರ್ಮಿಸಲು ಯೋಗ ಅವಶ್ಯ ಎಂದು ರಾಷ್ಟ್ರೀಯ ಯೋಗಾಪಟು ಎಸ್.ಟಿ.ರಾಘವೇಂದ್ರ ಹೇಳಿದರು.
ನಗರದ ಸ್ಫೂರ್ತಿ ಯೋಗ ಕೇಂದ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಬ್ಬರೂ ಯೋಗ, ಪ್ರಾಣಾಯಾಮ ರೂಢಿಸಿಕೊಂಡರೆ ಆರೋಗ್ಯವಂತ ಸಮಾಜ ಕಟ್ಟಬಹುದು ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಪ್ರಶಾಂತ್‌ಕುಮಾರ್, ಪದಾಧಿಕಾರಿಗಳಾದ ನಾಗಭೂಷಣ್, ರಾಮಕೃಷ್ಣ, ಶಿವಪ್ರಸಾದ್, ರಾಜಶೇಖರ್, ಭುವನೇಶ್ವರಿ, ಶುಭಾ ನಾಭೂಷಣ್ ಇತರರಿದ್ದರು.