ನಾನೂ ಕೂಡ ಮಣ್ಣಿನ ಮಗ

BC PATIL download
Published on

ಹಿರಿಯೂರು: ಕೃಷಿ ಇಲಾಖೆ ಸಮಸ್ಯೆಗಳ ಆಗಾರ. ಇಲಾಖೆ ಕಾರ್ಯವನ್ನು ಅರ್ಥ ಮಾಡಿಕೊಂಡು, ಸಮರ್ಪಕವಾಗಿ ಕೆಲಸ ಮಾಡುವ ವಿಶ್ವಾಸವಿದೆ ಎಂದು ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ಇಲ್ಲಿನ ಪ್ರವಾಸಿ ಮಂದಿರ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ರೈತರ ಸಭೆಯಲ್ಲಿ ಮಾತನಾಡಿ, ಆರಂಭದಲ್ಲಿ ಅರಣ್ಯ ಖಾತೆ ಕೊಟ್ಟಾಗ ನಾನು ಪ್ರಾಣಿಗಳ ಜತೆ ಕೆಲಸ ಮಾಡಲು ಸಾಧ್ಯವಿಲ್ಲ, ಜನರ ಜತೆ ಬೆರೆತು ಕೆಲಸ ಮಾಡಬೇಕು ಎಂದು ಹೇಳಿದ್ದೆ. ಬಿಎಸ್‌ವೈ ಅವರು ನನ್ನ ಮೇಲೆ ವಿಶ್ವಾಸವಿಟ್ಟು ಕೃಷಿ ಖಾತೆ ಕೊಟ್ಟಿದ್ದು ಸಂತಸ ತಂದಿದೆ ಎಂದರು.

ಸಂಕಷ್ಟದಲ್ಲಿರುವ ಅನ್ನದಾತರ ಕಣ್ಣೀರು ಹೊರೆಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು. ನನ್ನದು ರೈತ ಕುಟುಂಬ, ನಾನು ಮಣ್ಣಿನ ಮಗ, ರೈತರ ಪರ ಹೋರಾಟದಲ್ಲಿ ಕೈ ಜೋಡಿಸಿದ್ದೇನೆ, ರೈತರ ಸಮಸ್ಯೆಗಳ ಬಗ್ಗೆ ಅರಿವಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net