ಶಿಕ್ಷಣದಿಂದ ಉಜ್ವಲ ಭವಿಷ್ಯ ಸಾಧ್ಯ

dj hyr sudhakar
Published on

ಹಿರಿಯೂರು: ಶಿಕ್ಷಣದಿಂದ ಮಾತ್ರ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲು ಸಾಧ್ಯ. ಲಕ್ಷಾಂತರ ಜನರಿಗೆ ಅಕ್ಷರದ ಅರಿವು ಮೂಡಿಸಿರುವ ತಾಲೂಕಿನ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪ್ರಸ್ತುತ ವರ್ಷ 26 ಕೋಟಿ ರೂ. ಅನುದಾನ ನೀಡಲಾಗುತ್ತದೆ ಎಂದು ಸಚಿವ ಡಿ. ಸುಧಾಕರ್ ಹೇಳಿದರು.

ನಗರದ ತನ್ಯಾಸಿ ಗೌಂಡರ್ ಕಲ್ಯಾಣ ಮಂಟಪದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಶಾಖೆ ನೇತೃತ್ವದಲ್ಲಿ ಶನಿವಾರ ಹಮ್ಮಿಕೊಂಡಿದ್ದ

ತಾಲೂಕಿನ ಶಿಕ್ಷಕರಿಗೆ ಶೈಕ್ಷಣಿಕ ಕಾರ್ಯಾಗಾರ ಹಾಗೂ ಶಿಕ್ಷಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ಅಧಿಕಾರದ ಅವಧಿಯಲ್ಲಿ ತಾಲೂಕಿನ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸಿದ್ದೇನೆ ಎಂದರು.

ಕುಡಿಯುವ ನೀರು, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದೇನೆ.

ದೇವರಕೊಟ್ಟ ಗ್ರಾಮದ ವಸತಿ ಶಾಲೆಗಳ ಸಮುಚ್ಛಯ ನನ್ನ ಶಿಕ್ಷಣದ ಮೇಲಿರುವ ಕಾಳಜಿಯ ಧ್ಯೋತಕವಾಗಿದೆ.

ಶಿಕ್ಷಕರ ಸಂಘದ ಸೇವಾ ಕೇಂದ್ರಕ್ಕೆ ನೂತನ ಕೊಠಡಿ ನಿರ್ಮಿಸಲು ಸಹಕಾರ ನೀಡುತ್ತೇನೆ ಎಂದು ಸಚಿವರು ಭರವಸೆ ನೀಡಿದರು.

ನಿವೃತ್ತ ನ್ಯಾಯಾಧೀಶ ಎಚ್. ಬಿಲ್ಲಪ್ಪ ಮಾತನಾಡಿ, ಶಿಕ್ಷಣ ರಹಿತ ಸಮಾಜ ಅನಾರೋಗ್ಯ ಪೀಡಿತ ಸಮಾಜವಾಗಿ ಉಳಿಯುತ್ತದೆ.

ಪಾಲಕರು ತಮ್ಮ ಮಕ್ಕಳು ಶೇ.100 ರಷ್ಟು ಅಂಕ ಗಳಿಸಲಿ ಎಂದು ಒತ್ತಡ ಹಾಕುವ ಬದಲು ಮಾನವೀಯ ಮೌಲ್ಯ, ಉತ್ತಮ ಸಂಸ್ಕಾರ ಇರುವಂತವರಾಗಲಿ ಎಂದು ಆಶಿಸಬೇಕು.

ನಿಷ್ಠೆ, ಪ್ರಾಮಾಣಿಕತೆ, ದಕ್ಷತೆ, ಆತ್ಮವಿಶ್ವಾಸ ತುಂಬುವಂತಹ ಕೆಲಸ ಮಾಡಬೇಕು ಎಂದರು.

ಎಸ್ಸೆಸ್ಸೆಲ್ಸಿ ಪರೀಕ್ಷಾ ಮಂಡಳಿ ನಿವೃತ್ತ ಕಾರ್ಯದರ್ಶಿ ಎಂ.ರೇವಣಸಿದ್ದಪ್ಪ ಮಾತನಾಡಿ, ಡಿಡಿಪಿಐ ರವಿಶಂಕರ್ ರೆಡ್ಡಿ, ಜಿಲ್ಲಾ ಯೋಜನಾಧಿಕಾರಿ ಶೈಲಜಾ,

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್, ಡಿವೈಎಸ್ಪಿ ಎಸ್. ಚೈತ್ರ, ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾರುತೇಶ್,

ತಾಲೂಕು ಸಂಘದ ಅಧ್ಯಕ್ಷ ಮಂಜುನಾಥ್, ಮಹೇಶ್ವರ ರೆಡ್ಡಿ, ಜಿ.ಟಿ. ಹನುಮಂತಪ್ಪ, ತಿಪ್ಪೇರುದ್ರಪ್ಪ, ಶಿವಕುಮಾರ್, ಎಚ್. ಶಿವಮೂರ್ತಿ,

ಹನುಮಂತರೆಡ್ಡಿ, ಶಿವಶಂಕರ್, ಖಾದಿ ರಮೇಶ್, ಕಂದಿಕೆರೆ ಸುರೇಶ್ ಬಾಬು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net