ನಿಯಮ ಪಾಲಿಸಿದರೆ ಕರೊನಾಕ್ಕೆ ತಡೆ

HYR jg halli 19
Published on

ಹಿರಿಯೂರು: ದೇಶದಲ್ಲಿ ಕರೊನಾ ಸೋಂಕು ಮಿತಿ ಮೀರುತ್ತಿದ್ದು, ಜನರು ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದಾಗ ಮಾತ್ರ ಕರೊನಾ ತಡೆಯಲು ಸಾಧ್ಯ ಎಂದು ಸಮಾಜ ಸೇವಕಿ ಶಶಿಕಲಾ ರವಿಶಂಕರ್ ಹೇಳಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ತಾಲೂಕಿನ ಜೆ.ಜಿ.ಹಳ್ಳಿ ಹೋಬಳಿ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ-ಆಶಾ ಕಾಯಕರ್ತೆಯರಿಗೆ ಕೊಡೆ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ಕರೊನಾ ಸೋಂಕು ವೇಗವಾಗಿ ಹರಡುತ್ತಿದ್ದು, ಅನ್‌ಲಾಕ್ ಎನ್ನುವ ಕಾರಣಕ್ಕೆ ಜನರು ಎಚ್ಚರ ತಪ್ಪಿದರೆ ಮಹಾಮಾರಿ ಮನೆ ಬಾಗಿಲಿಗೆ ಬರಲಿದೆ. ಪರಸ್ಪರ ಅಂತರ, ಮಾಸ್ಕ್, ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಬೇಕು. ಸೋಂಕಿನಿಂದ ದೇಶದ ಜನರನ್ನು ಪಾರು ಮಾಡಲು ಕರೊನಾ ಸೇನಾನಿಗಳು ಹಗಲಿರುಳು ಶ್ರಮಿಸುತ್ತಿದ್ದು, ಅವರ ಸೇವೆಯನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದರು.

ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷ ಎಚ್.ಎಸ್.ಸುಂದರ್‌ರಾಜ್, ಪದಾಧಿಕಾರಿಗಳಾದ ಇಸ್ಮಾಯಿಲ್ ಧರ್ಮಪುರ, ಸಿ.ನಾರಾಯಣಾಚಾರ್, ಸತೀಶ್ ಬಾಬು, ರಾಘವೇಂದ್ರ, ಮಾಲತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net