

ಹಿರಿಯೂರು: ದೇಶ ಕರೊನಾ ಸಂಕಷ್ಟದಿಂದ ಪಾರಾಗಿ, ಆರೋಗ್ಯಯುತ ಸಮಾಜ ನಿರ್ಮಾಣವಾಗಲಿ ಎಂದು ಪ್ರಾರ್ಥಿಸಿ ತಾಲೂಕಿನ ಹರ್ತಿಕೋಟೆ ಗ್ರಾಮಸ್ಥರು ಹೋಳಿಗೆಮ್ಮ ಹಬ್ಬ ಆಚರಣೆ ಮೂಲಕ ದೇವರಲ್ಲಿ ಪ್ರಾರ್ಥಿಸಿದರು.
ಬಯಲು ಸೀಮೆ ಜನರ ಆಚಾರ-ವಿಚಾರ, ಸಂಸ್ಕೃತಿ ವಿಶಿಷ್ಟವಾಗಿದ್ದು, ಐತಿಹಾಸಿಕ ಹಿನ್ನೆಲೆಯ ಗ್ರಾಮ ಹರ್ತಿಕೋಟೆ ಗ್ರಾಮಸ್ಥರು ಕರೊನಾ ಸಂಕಷ್ಟ ನಿವಾರಣೆಗೆ ಶುಕ್ರವಾರ ವಿಶೇಷವಾಗಿ ಪ್ರಾರ್ಥಿಸಿದ್ದು ಗಮನ ಸೆಳೆದಿದೆ.
ಗ್ರಾಮದ ಜನರು ಬೆಳಗ್ಗೆಯಿಂದ ಉಪವಾಸ ವೃತ್ತದ ಮೂಲಕ, ಹೋಳಿಗೆ, ತುಪ್ಪ, ಅನ್ನ ಮೊಸರು ಎಡೆಯನ್ನು ದೇಗುಲದ ಬಳಿ ಹಾಕಿ, ದೇವಿಗೆ ಅರಿಶಿನ, ಕುಂಕುಮ, ತೆಂಗಿನ ಕಾಯಿ, ಹಣ್ಣು-ಹಂಪಲು ಅರ್ಪಿಸಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಸಾಂಕ್ರಾಮಿಕ ರೋಗ, ಸಂಕಷ್ಟದ ಸಮಯದಲ್ಲಿ ಈ ರೀತಿಯ ಆಚರಣೆಗಳು ಗ್ರಾಮದಲ್ಲಿ ನಡೆದುಕೊಂಡು ಬಂದಿವೆ.