ಪೌರ ನೌಕರರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ

Narayanachar 1
Published on

ಹಿರಿಯೂರು: ಕರೊನಾ ವೈರಸ್ ವೇಳೆಯೂ ಸ್ವಚ್ಛತೆ ಕಾರ್ಯ ನಿರಂತರವಾಗಿ ನಡೆಸುತ್ತಿರುವ ಪೌರ ಕಾರ್ಮಿಕರು ಹಾಗೂ ಕುಟುಂಬಕ್ಕೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸುವಂತೆ ರಾಜ್ಯ ನಿವೃತ್ತ ಪೌರ ನೌಕರ ಸಂಘದ ಎಲ್.ನಾರಾಯಣಾಚಾರ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಪೌರ ನೌಕರರ ಸೇವೆ ಅವಿಸ್ಮರಣೀಯ. ಕರೊನಾ ವಿರುದ್ಧ ಯುದ್ಧದಲ್ಲಿ ಇವರ ಸೇವೆ ಸ್ಮರಿಸುವುದು ನಾಡಿನ ಜನರ ಆದ್ಯ ಕರ್ತವ್ಯ. ಸಾಮಾನ್ಯ ಜನರು ಮುಟ್ಟಲು, ನೋಡಲು ಅಸಹ್ಯ ಪಡುವ ವಸ್ತಗಳನ್ನು ಕೈಯಿಂದ ತೆಗೆದು ನಗರ, ಪಟ್ಟಣದ ಸ್ವಚ್ಛತೆಗೆ ಶ್ರಮಿಸುತ್ತಿದ್ದಾರೆ.

ಅದರಲ್ಲೂ ಕರೊನಾ ಸಂದರ್ಭದಲ್ಲಿ ಮನೆಯಿಂದ ಹೊರಬರಲು ಜನ ಭಯಭೀತರಾಗಿರುವ ಸಂದರ್ಭದಲ್ಲಿ ನಗರದ ಸ್ವಚ್ಛತೆಗೆ ಧಕ್ಕೆ ಆಗದಂತೆ ಕರ್ತವ್ಯ ನಿರ್ವಹಿಸುತ್ತಿರುವ ಪೌರ ಸಿಬ್ಬಂದಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸುವ ಮೂಲಕ ಅವರನ್ನು ಗೌರವಿಸಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net