

ಹಿರಿಯೂರು: ಕರೊನಾ ಮಹಾಮಾರಿ ವಿರುದ್ಧ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಆಶಾ ಕಾರ್ಯಕರ್ತೆಯರ ಸೇವೆ ಶ್ಲಾಘನೀಯ ಎಂದು ಯುತ್ ರೆಡ್‌ಕ್ರಾಸ್ ಅಧ್ಯಕ್ಷ ಮಹಮ್ಮದ್ ಇಸ್ಮಾಯಿಲ್ ಹೇಳಿದರು.
ತಾಲೂಕಿನ ಧರ್ಮಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರಿಗೆ ಕೊಡೆ ವಿತರಿಸಿ ಮಾತನಾಡಿದರು.
ಕರೊನಾ ವೈರಸ್ ಸೋಂಕಿನಿಂದ ದೇಶ ಸಂಕಷ್ಟದಲ್ಲಿದ್ದು, ಸರ್ಕಾರದ ನಿಯಮ ಪಾಲಿಸುವುದರ ಜತೆಗೆ ಕರೊನಾ ವಾರಿಯರ್ಸ್ ಸೇವೆಯನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಬೇಕು. ಜನರ ಸುರಕ್ಷತೆಗೆ ಹಗಲಿರುಳು ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ರಕ್ಷಣೆ ನೀಡಬೇಕು ಎಂದರು.
ಡಾ.ವಿಜಯ್, ಸಿ.ನಾರಾಯಣಾಚಾರ್, ಸತೀಶ್‌ಬಾಬು, ಡಾ.ಹನುಮಂತರಾಯ, ಸಬ್ರಹ್ಮಣ್ಯ ಗುಪ್ತಾ, ದೇವರಾಜ್, ಪ್ರಿಯಾಂಕಾ ಇತರರಿದ್ದರು.