ಹಿರಿಯೂರಿನಲ್ಲಿ 3383 ಮಕ್ಕಳು ಹಾಜರು

HYR SSLC 25
Published on

ಹಿರಿಯೂರು: ಕರೊನಾ ಆತಂಕದ ನಡುವೆಯೂ ತಾಲೂಕಿನಲ್ಲಿ ಗುರುವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮವಾಗಿ ನಡೆಯಿತು.

ತಾಲೂಕಿನ 14 ಕೇಂದ್ರಗಳಲ್ಲಿ 3589 ವಿದ್ಯಾರ್ಥಿಗಳು ನೋಂದಾಯಿಸಿದ್ದು, 3383 ಮಕ್ಕಳು ಪರೀಕ್ಷೆ ಬರೆದರೆ, 206 ಮಂದಿ ಗೈರಾಗಿದ್ದರು. ಕಂಟೇನ್ಮೆಂಟ್ ಪ್ರದೇಶಗಳ 15 ಮಂದಿ ಹಾಜರಾಗಿದ್ದರು. ಅನಾರೋಗ್ಯ ಕಾರಣದಿಂದ ಒಬ್ಬ ವಿದ್ಯಾರ್ಥಿ ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆದನು. 62 ಮಂದಿ ವಲಸೆ ವಿದ್ಯಾರ್ಥಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net