ಕುರಿಗಾಹಿಗಳಿಬ್ಬರ ದುರ್ಮರಣ

CTD kuri 31
Published on

ಹಿರಿಯೂರು: ಚಿತ್ರದುಗ ಜಿಲ್ಲೆ ಹಿರಿಯೂರು ತಾಲೂಕು ಉಳುವಿನಾಳು ಗ್ರಾಮದ ಕೆರೆಯಲ್ಲಿ ಕುರಿಗಳನ್ನು ಮೈ ತೊಳೆಯಲು ಭಾನುವಾರ ತೆರಳಿದ್ದ ಇಬ್ಬರು ಕುರಿಗಾಹಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಬೇವಿನಮರದಹಟ್ಟಿ ಗ್ರಾಮದ ಶೀಗಣ್ಣ (65), ಪ್ರತಾಪ್ (23) ಮೃತರು. ಕೆರೆಯಲ್ಲಿ ಕುರಿ ಹಿಂಡನ್ನು ಮೈ ತೊಳೆಯುವಾಗ ದುರ್ಘಟನೆ ಸಂಭವಿಸಿದೆ.

ಭೇಟಿ: ತಹಸೀಲ್ದಾರ್ ಸತ್ಯನಾರಾಯಣ, ಸಿಪಿಐ ರಾಘವೇಂದ್ರ ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಪರಿಹಾರದ ಭರವಸೆ: ಫೋನ್ ಕರೆ ಮಾಡಿ ಮೃತ ಕುಟುಂಬಗಳಿಗೆ ಸಾಂತ್ವನ ಹೇಳಿರುವ ಶಾಸಕಿ ಕೆ.ಪೂರ್ಣಿಮಾ, ಸರ್ಕಾರದಿಂದ ಪರಿಹಾರ ಕೊಡಿಸಲಾಗುವುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net