ಗೆದ್ದು ವರ್ಷ ಆಯ್ತು, ಗದ್ದುಗೆ ದೂರ

HYR cmc 31
Published on

ಹಿರಿಯೂರು: ನಗರಸಭೆಯಲ್ಲಿ ಚುನಾಯಿತ ಸದಸ್ಯರಾಗಿ ಅಧಿಕಾರವಿಲ್ಲದೆ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸದಸ್ಯರು ಕೇಕ್ ಕತ್ತರಿಸಿ ವರ್ಷಾಚರಣೆ ಆಚರಿಸುವ ಮೂಲಕ ಸರ್ಕಾರದ ವಿರುದ್ಧ ವಿನೂತವಾಗಿ ಭಾನುವಾರ ಪ್ರತಿಭಟನೆ ನಡೆಸಿದರು.

ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ನಿಗದಿ ಸಂಬಂಧ ಸರ್ಕಾರದ ವಿಳಂಬ ದೋರಣೆ, ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಅಧಿಕಾರಿ ಸ್ವೀಕಾರಕ್ಕೆ ಹಿನ್ನಡೆಯಾಗಿದೆ ಎಂದು ಬೇಸರಿಸಿದರು.

ಸದಸ್ಯರಾದ ಸಣ್ಣಪ್ಪ, ಬಿ.ಎನ್.ಪ್ರಕಾಶ್, ಎಂ.ಎಸ್.ಈರಲಿಂಗೇಗೌಡ, ಅಜಯ್‌ಕುಮಾರ್, ಎಸ್.ಪಿ.ಟಿ.ದಾದಾಪೀರ್, ಸರೇಖಾ, ಮಮತಾ, ಮಂಜುಳಮ್ಮ, ಮೇರಿ, ಕವಿತಾ, ದೇವೀರಮ್ಮ, ಸಮೀವುಲ್ಲಾ, ಚಿತ್ರಜಿತ್ ಯಾದವ್, ಫಿಕಾರ್ಪ್ ಬ್ಯಾಂಕ್ ಮಾಜಿ ಅಧ್ಯಕ್ಷ ಪಿ.ಎಸ್.ಸಾದತ್ ವುಲ್ಲಾ, ಜಿ.ದಾದಾಪೀರ್ ಇತರರಿದ್ದರು.

ರಾಜ್ಯ ಸರ್ಕಾರದ ವಿಳಂಬ ದೋರಣೆಯಿಂದ ನಗರಸಭೆ ಸದಸ್ಯರು ಅಧಿಕಾರವಿಲ್ಲದೆ ಕಾಲ ದೂಡುವಂತಾಗಿದೆ. ಸರ್ಕಾರ ಇನ್ನಾದರು ಎಚ್ಚೆತ್ತುಕೊಂಡು, ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಸಮಯ ನಿಗದಿಪಡಿಸಬೇಕು.
ಶಂಶುನ್ನಿಸಾ ನಗರಸಭೆ ಸದಸ್ಯೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net