ರಕ್ತದ ಗುಂಪು ತಿಳಿವುದು ಅತ್ಯವಶ್ಯ

HYR SHALE 04
Published on

ಹಿರಿಯೂರು: ಪ್ರತಿಯೊಬ್ಬರೂ ರಕ್ತದ ಗುಂಪನ್ನು ತಿಳಿದುಕೊಳ್ಳುವುದರಿಂದ ತುರ್ತು ಸಂದರ್ಭದಲ್ಲಿ ಶೀಘ್ರವಾಗಿ ರಕ್ತ ಪಡೆಯಲು ಹಾಗೂ ದಾನ ಮಾಡಲು ಸಹಕಾರಿಯಾಗುತ್ತದೆ ಎಂದು ಎವಿ ಕೊಟ್ಟಿಗೆ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶ್ರೀಹರ್ಷ ತಿಳಿಸಿದರು.

ತಾಲೂಕಿನ ಬೀರೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಮಕ್ಕಳಿಗೆ ಹಮ್ಮಿಕೊಂಡಿದ್ದ ರಕ್ತದ ಗುಂಪು ಪರೀಕ್ಷಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ತಾಲೂಕು ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಕೆ.ಜಿ.ಹನುಮಂತರಾಯ ಮಾತನಾಡಿ, ಕೆಲವರಿಗೆ ಕಾಯಿಲೆಗಳು ಬಂದಾಗ ರಕ್ತ ಕಡಿಮೆ ಆಗುತ್ತದೆ. ಇಂತಹ ಸಂದರ್ಭದಲ್ಲಿ ಬೇರೊಬ್ಬರಿಂದ ತಕ್ಷಣವೇ ರಕ್ತ ಪಡೆಯಲು ರಕ್ತದ ಗುಂಪು ತಿಳಿದಿದ್ದರೆ ತುಂಬಾ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಲ್ಯಾಬ್ ಟೆಕ್ನಿಶಿಯನ್ ಮಾಲತಿ, ಆರೋಗ್ಯ ನಿರೀಕ್ಷಕ ಗಿರೀಶ್, ವಿನಾಯಕ, ವೀಣಾ, ಪ್ರಮೋದ್, ಸುಮಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net