ಜನರ ಹಿತಕ್ಕೆ ನಮೋ ದಿಟ್ಟ ಹೆಜ್ಜೆ

HYR mask day 18
Published on

ಹಿರಿಯೂರು: ದೇಶದ ಜನರನ್ನು ಕರೊನಾ ಸೋಂಕಿನಿಂದ ಪಾರು ಮಾಡಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಡಿ.ಟಿ.ಶ್ರೀನಿವಾಸ್ ಹೇಳಿದರು.

ತಾಲೂಕು ಆಡಳಿತ, ಆರೋಗ್ಯ ಇಲಾಖೆ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ಮಾಸ್ಕ್ ಡೇ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್ಯ ಸರ್ಕಾರ ಜನರ ಸುರಕ್ಷತೆಗೆ ಮಾಸ್ಕ್ ಡೇ ಆಚರಿಸುತ್ತಿದ್ದು, ಪ್ರತಿಯೊಬ್ಬರು ಕರೊನಾ ಸೋಂಕಿನಿಂದ ಪಾರಾಗಲು ಪರಸ್ಪರ ಅಂತರ, ಸ್ಯಾನಿಟೈಸೇಷನ್, ಮಾಸ್ಕ್ ಅನ್ನು ಕಡ್ಡಾಯವಾಗಿ ಬಳಸಬೇಕು ಎಂದರು.

ತಹಸೀಲ್ದಾರ್ ಸತ್ಯನಾರಾಯಣ, ಟಿಎಚ್‌ಒ ವೆಂಕಟೇಶ್, ನಗರಸಭೆ ಪೌರಾಯುಕ್ತೆ ಲೀಲಾವತಿ, ಸದಸ್ಯರಾದ ಮಹೇಶ್ ಪಲ್ಲವ, ಶಿವರಂಜನಿ, ನಿರಂಜನ್ ಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net