ಮಾನವೀಯಮೌಲ್ಯ ರೂಢಿಸಿಕೊಳ್ಳಿ

HYR MG school 09
Published on

ಹಿರಿಯೂರು: ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳ ಜತೆ ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು ಎಂದು ಬಿಜೆಪಿ ಮುಖಂಡ ಡಿ.ಟಿ.ಶ್ರೀನಿವಾಸ್ ಹೇಳಿದರು.

ನಗರದ ಮೋಕ್ಷಗುಂಡಂ ವಿಶ್ವೇಶ್ವರಯ್ಯ ವಿದ್ಯಾಮಂದಿರದಲ್ಲಿ ಗುರುವಾರ ಏರ್ಪಡಿಸಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾಧನೆ ಮಾಡಲು ಹೊರಟವನಿಗೆ ಯಾವುದೂ ಅಸಾಧ್ಯವಲ್ಲ. ಮಾಡುವ ಕೆಲಸದಲ್ಲಿ ಪರಿಶ್ರಮ, ಶ್ರದ್ಧೆ ಇದ್ದರೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹುದು ಎಂದರು.

ಆಡಳಿತ ಮಂಡಳಿ ಅಧ್ಯಕ್ಷ ವೈ.ಜಗದೀಶ್ ದರೆದಾರ್ ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿ ಉತ್ತಮ ಹವ್ಯಾಸ ರೂಢಿಸಿಕೊಳ್ಳಬೇಕು. ನಿಶ್ಚಿತ ಗುರಿಯೊಂದಿಗೆ ಸಾಗಿದರೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬಹುದು ಎಂದು ತಿಳಿಸಿದರು.

ಪದವಿ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದ ಎಂ.ಆರ್.ಅಮೃತಲಕ್ಷಿ, ನಿವೇದಿತಾ ಮತ್ತು ಪ್ರತಿಭಾವಂತ ಕ್ರೀಡಾಪಟು ಮಹಮ್ಮದ್ ಜೀಶಾನ್ ಅವರನ್ನು ಗೌರವಿಸಲಾಯಿತು.

ನಿರ್ದೇಶಕರಾದ ಎಚ್.ಎಂ.ಬಸವರಾಜ್, ಕೆ.ಹೊನ್ನೂರ್‌ಸಾಬ್, ಸಿ.ಮೋಕ್ಷನಾಥಯ್ಯ, ಕಾರ್ಯದರ್ಶಿ ಕೆ.ಆರ್.ವೀರಭದ್ರಯ್ಯ, ಖಜಾಂಚಿ ಸಣ್ಣ ಭೀಮಣ್ಣ, ಎಂ.ಬಸವರಾಜಪ್ಪ, ಬಿ.ವಿ.ಸೂರ್ಯಪ್ರಕಾಶ್, ಮುಖ್ಯಶಿಕ್ಷಕ ಜಿ.ತಿಪ್ಪೇಸ್ವಾಮಿ, ಜಿ.ದೇವರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net