ಧರ್ಮಪುರ ಕೆರೆಗೂ ಹರಿಸಿ ನೀರು

HYR BJP 01
Published on

ಹಿರಿಯೂರು: ವಿವಿ ಸಾಗರ ಜಲಾಶಯದಿಂದ ತಾಲೂಕಿನ ಧರ್ಮಪುರ ಕೆರೆಗೆ ನೀರು ಹರಿಸುವಂತೆ ಶುಕ್ರವಾರ ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದರು.

ಗ್ರಾಮದ ಮುಖ್ಯ ರಸ್ತೆಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಯಾವುದಾದರು ಮೂಲದಿಂದ ಧರ್ಮಪುರ ಕೆರೆಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವಂತೆ ನೂರು ವರ್ಷದಿಂದ ರೈತರು ಹೋರಾಟ ನಡೆಸಿದರೂ ಮನ್ನಣೆ ದೊರೆತಿಲ್ಲ ಎಂದು ಅಳಲು ತೋಡಿಕೊಂಡರು.

ಧರ್ಮಪುರ ಹೋಬಳಿಯಲ್ಲಿ ಅಂತರ್ಜಲ ಅಪಾಯದ ಮಟ್ಟ ತಲುಪಿದ್ದು ಜನ-ಜಾನುವಾರುಗಳು ಹನಿ ನೀರಿಗೂ ಪರಿತಪಿಸುತ್ತಿವೆ. ಕೆಲವೆಡೆ ಟ್ಯಾಂಕರ್ ಮೂಲಕ ಕುಡಿವ ನೀರು ಪೂರೈಸಲಾಗುತ್ತಿದೆ. ತಾಲೂಕಿನಲ್ಲಿ ಎರಡು ಜಲಾಶಯವಿದ್ದರು ಧರ್ಮಪುರ ಹೋಬಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಧರ್ಮಪುರ ಕೆರೆಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವ ಭರವಸೆ ಬಿ.ಎಸ್.ಯಡಿಯೂರಪ್ಪ ಚುನಾವಣೆ ಪ್ರಚಾರದ ವೇಳೆ ನೀಡಿದ್ದರು.

ಸರ್ಕಾರ ತಕ್ಷಣ ಧರ್ಮಪುರ ಕೆರೆಗೆ ಕುಡಿವ ಉದ್ದೇಶಕ್ಕೆ 0.75 ಟಿಎಂಸಿ ಅಡಿ ನೀರು ಹರಿಸಲು ಯೋಜನೆ ರೂಪಿಸಿ ಕಾರ್ಯಗತಗೊಳಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ನಾಗರಾಜ್ ರಾವ್, ಶ್ರವಣಗೆರೆ ಎಂ.ಶಿವಣ್ಣ, ಬೆನಕನಹಳ್ಳಿ ಶಿವಮೂರ್ತಿ, ಓಬಳೇಶ್, ರವಿಶಂಕರ್, ಬಂಗಾರಪ್ಪ, ಈಶ್ವರಪ್ಪ, ಈರಣ್ಣ, ನಾಗರಾಜ್, ಮುರಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net