ಶಂಕರಲಿಂಗೇಶ್ವರ ವಿಗ್ರಹ ಪ್ರತಿಷ್ಠಾಪನೆ

SHIVALINGA download
Published on

ಹಿರಿಯೂರು: ತಾಲೂಕಿನ ಬೇತೂರು ಗ್ರಾಮದಲ್ಲಿ ಶ್ರೀ ಶಂಕರಲಿಂಗೇಶ್ವರ ಸ್ವಾಮಿ ನೂತನ ವಿಗ್ರಹ ಪ್ರತಿಷ್ಠಾಪನೆ ಮತ್ತು ಧಾರ್ಮಿಕ ಕಾರ್ಯಕ್ರಮ ಫೆ.2ರಿಂದ 3ರ ವರೆಗೆ ನಡೆಯಲಿದೆ.

2ರಂದು ಗಂಗಾಪೂಜೆ, ಗೋಪೂಜೆ, ಗಣಪತಿ ಹೋಮ, ಪುಣ್ಯಾಹ, ವಿಗ್ರಹಗಳ ಶುದ್ಧಿ, ಶಯಾನಾದಿವಾಸ. 3ರಂದು ವಿಗ್ರಹ ಸ್ಥಾಪನೆ, ರುದ್ರಾಭಿಷೇಕ, ಕುಂಭಾಭಿಷೇಕ, ಕಳಸಪೂಜೆ, ಪಂಚಕಳಸ, ಉಮಾಮಹೇಶ್ವರ ಪೂಜೆ, ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಇತರ ಕಾರ್ಯಕ್ರಮ ಜರುಗಲಿದೆ.

ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಕಪ್ಪೂರ ಗದ್ದುಗೆ ಸಂಸ್ಥಾನ ಮಠದ ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಶಾಂತಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ ಧಾರ್ಮಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ದೇವಸ್ಥಾನ ಸೇವಾ ಸಮಿತಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net