ಹೇಮಾವತಿ ಹೆಂಜೇರು ಜಾತೋತ್ಸವ

HYR jatre 23
Published on

ಹಿರಿಯೂರು: ಆಂಧ್ರ-ಕರ್ನಾಟಕದ ಗಡಿ ಗ್ರಾಮ ಹೇಮಾವತಿ ಹೆಂಜೇರು ಸಿದ್ದೇಶ್ವರ ಸ್ವಾಮಿ ಜಾತ್ರೋತ್ಸವ ಭಾನುವಾರ ವಿಜೃಂಭಣೆಯಿಂದ ಜರುಗಿತು.

ಒಂದು ವಾರಗಳ ಕಾಲ ಜರುಗುವ ಜಾತ್ರೆ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಜ್ಯ-ಆಂಧ್ರಪ್ರದೇಶದ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಭಕ್ತರು, ಹರ ಹರ ಮಹಾದೇವ ಎಂಬ ಜಯಘೋಷದೊಂದಿಗೆ ದೇಗುಲ ಮುಂಭಾಗದ ಅಗ್ನಿಕುಂಡಕ್ಕೆ ಶೇಂಗಾ, ಔಡಲ, ಕೊಬ್ಬರಿ, ಬೆಳ್ಳಿ-ತಾಮ್ರದ ಹಾವು ಚೇಳು, ಧೂಪ ಹಾಕಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಹಣ್ಣುಕಾಯಿ ಹಾಗೂ ನೈವೇದ್ಯ ಸಮರ್ಪಿಸಿ ಭಕ್ತಿ ಮೆರೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net