ಹಿರಿಯೂರು ಅಂಬೇಡ್ಕರ್ ವೃತ್ತಕ್ಕೆ ಹೈಟೆಕ್ ಸ್ಪರ್ಶ: ಸಂವಿಧಾನ ಶಿಲ್ಪಿ ಪುತ್ಥಳಿ ಅನಾವರಣಕ್ಕೆ ಕ್ಷಣಗಣನೆ

hyr
Published on

ಹಿರಿಯೂರು: ನಗರದ ಪ್ರವಾಸಿ ಮಂದಿರ ವೃತ್ತದ ಸಮೀಪ ನಿರ್ಮಿಸಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಹಾಗೂ ವೃತ್ತ ಅನಾವರಣ ಕಾರ್ಯಕ್ರಮ ಮಂಗಳವಾರ ಆಯೋಜಿಸಿದ್ದು, ತಾಲೂಕಿನ ದಲಿತ ಸಮುದಾಯದ ದಶಕದ ಕನಸು ನನಸಾಗುತ್ತಿದೆ.

ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಲು, ಅವರ ತತ್ವ ಸಿದ್ಧಾಂತ, ಕೊಡುಗೆ ಬಗ್ಗೆ ಸ್ಮರಿಸಲು ಮಹಾನಾಯಕನ ಕಂಚಿನ ಪ್ರತಿಮೆ ಸ್ಥಾಪಿಸಬೇಕೆಂಬುದು ದಲಿತ ಸಂಘಟನೆಗಳ ಬಹುದಿನಗಳ ಕನಸಾಗಿತ್ತು. 5 ಲಕ್ಷ ರೂ. ವೆಚ್ಚದಲ್ಲಿ 6 ಅಡಿ ಎತ್ತರದ ಕಂಚಿನ ಪುತ್ಥಳಿ ಪ್ರತಿಷ್ಠಾಪಿಸಿದ್ದು, ಉದ್ಘಾಟನೆ ಭಾಗ್ಯ ಕೂಡಿಬಂದಿರುವುದು ಜನರಲ್ಲಿ ಸಂತಸ ತಂದಿದೆ.

ಸಚಿವ ಬಿ.ಶ್ರೀರಾಮುಲು, ಸಂಸದ ಎ.ನಾರಾಯಣಸ್ವಾಮಿ, ಶಾಸಕಿ ಕೆ.ಪೂರ್ಣಿಮಾ ಹಾಗೂ ದಲಿತ ಸಂಘಟನೆ, ಸಮುದಾಯದ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ವಿವಿ ಸಾಗರ ಎಡದಂಡೆ ನಾಲೆ ಪಕ್ಕದಲ್ಲಿರುವ ಅಂಬೇಡ್ಕರ್ ವೃತ್ತಕ್ಕೆ ಹೈಟೆಕ್ ಸ್ಪರ್ಶ ನೀಡಲಾಗಿದ್ದು, ವೃತ್ತದ ಸುತ್ತ ಹಸಿರು ಕಂಗೊಳಿಸುತ್ತಿದೆ. ವಿದ್ಯುದ್ದೀಪ, ಸಿ.ಸಿ.ಟಿವಿ, ಕ್ಯಾಮರಾ ಅಳವಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net