

ಹಿರಿಯೂರು: ರೈತರು ಆರ್ಥಿಕ ಪ್ರಗತಿ ಜತೆಗೆ ಸ್ವಾವಲಂಬಿ ಜೀವನಕ್ಕೆ ಸ್ಮಾರ್ಟ್ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಕೃಷಿ ವಿಜ್ಞಾನಿ ರುದ್ರಗೌಡ ತಿಳಿಸಿದರು.
ಬಬ್ಬೂರು ಕೃಷಿ ವಿಜ್ಞಾನ ಕೇಂದ್ರ ಸಹಯೋಗದಲ್ಲಿ ತಾಲೂಕಿನ ಶಿಡ್ಲಯ್ಯನ ಕೋಟೆ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ರಾಗಿ ಬೆಳೆ ಕ್ಷೇತ್ರೋತ್ಸವದಲ್ಲಿ ರೈತರಿಗೆ ಮಾಹಿತಿ ನೀಡಿದರು.
ಚಿತ್ರದುರ್ಗ ಜಿಲ್ಲೆ ಸದಾ ಬರಗಾಲದ ತಾಂಡವವಾಡುವ ಪ್ರದೇಶ. ಇಲ್ಲಿನ ರೈತರು ಮುಂಗಾರು-ಹಿಂಗಾರು ಹಂಗಾಮಿನಲ್ಲಿ ಎದುರಾಗುವ ಹವಾಮಾನ ವೈಪರೀತ್ಯಗಳನ್ನು ಮೆಟ್ಟಿ ನಿಂತು ಜಾಣ್ಮೆಯಿಂದ ಕೃಷಿ ಕಾರ್ಯದಲ್ಲಿ ತೊಡಗಿದರೆ ಹೆಚ್ಚು ಇಳುವರಿ ಜತೆಗೆ ಲಾಭವನ್ನು ಪಡೆಯಬಹುದು ಎಂದು ಸಲಹೆ ನೀಡಿದರು.
ಪ್ರಗತಿಪರ ರೈತ ಪ್ರದೀಪ್, ತಿಪ್ಪೇಸ್ವಾಮಿ, ರಂಗಪ್ಪ, ತಿಮ್ಮಣ್ಣ, ಹಂಪಣ್ಣ, ಶ್ರೀನಿವಾಸ್, ಚನ್ನಪ್ಪ ಇತರರಿದ್ದರು.