ವೈದ್ಯರಿಗೆ ಮಾನವೀಯತೆ ಅಗತ್ಯ

HYR Doctor 09
Published on

ಹಿರಿಯೂರು: ಬಡ, ಮಧ್ಯಮ ರೋಗಿಗಳಿಗೆ ಆರೋಗ್ಯ ಸೇವೆ ಕಡಿಮೆ ವೆಚ್ಚದಲ್ಲಿ ನೀಡುವ ಮನೋಭಾವ ವೈದ್ಯರು ಬೆಳೆಸಿಕೊಳ್ಳಬೇಕು ಎಂದು ಬಸ್ ಮಾಲೀಕ ಹೊಸಕೆರೆ ನಟರಾಜ್ ಹೇಳಿದರು.

ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ.ಮೋಹನ್‌ಕುಮಾರ್ ಅವರನ್ನು ಸೋಮವಾರ ಬಸ್ ಮಾಲೀಕರ ಸಂಘ ಹಾಗೂ ಏಜೆಂಟರ ಸಂಘದಿಂದ ಗೌರವಿಸಿ ಮಾತನಾಡಿದರು.

ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮಗುವಿನ ಮೂಗಿನ ಸರ್ಜರಿಗೆ ಒಂದು ಲಕ್ಷ ರೂ. ವೆಚ್ಚವಾಗಲಿದೆ ಎಂದು ತಿಳಿಸಿದ್ದರು. ಇದೇ ಸರ್ಜರಿಯನ್ನು ಡಾ.ಮೋಹನ್ ಕುಮಾರ್ ಕೇವಲ 30 ರೂ. ನೋಂದಣಿ ಶುಲ್ಕಕ್ಕೆ ಮಾಡಿದ್ದಾರೆ. ಬಡ ರೋಗಿಗಳಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುವ ವೈದ್ಯರ ಸಂಖ್ಯೆ ಹೆಚ್ಚಾಗಬೇಕು ಎಂದರು.

ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಸರ್ಜರಿಗೆ ಬೇಕಾದ ಸಲಕರಣೆಗಳ ಕೊರತೆ ಇದೆ. ಇವುಗಳನ್ನು ಸರ್ಕಾರ ಆದಷ್ಟು ಬೇಗ ಪೂರೈಸಬೇಕು ಎಂದು ಒತ್ತಾಯಿಸಿದರು.

ಕೃಷ್ಣಪ್ಪ, ನಾಗರಾಜ್, ಬದರಿಸ್ವಾಮಿ, ಯರಬಳ್ಳಿ ರಂಗಪ್ಪ, ತಿಪ್ಪೇಸ್ವಾಮಿ, ಇಮ್ರಾನ್, ಸಾದಿಕ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net