ಹಿರಿಯಡ್ಕದಲ್ಲಿ ರಿಕ್ಷಾ ಚಾಲಕನ ಕೊಲೆ ಯತ್ನ: ಇಬ್ಬರ ಬಂಧನ

IMG-20250502-WA0003
Published on

ಉಡುಪಿ: ಬಾಡಿಗೆಗೆ ತೆರಳುತ್ತಿದ್ದ ರಿಕ್ಷಾ ಚಾಲಕನನ್ನು ಹಿಂಬಾಲಿಸಿದ ಇಬ್ಬರು ದುಷ್ಕರ್ಮಿಗಳು ಹತ್ಯೆ ಪ್ರಯತ್ನಿಸಿದ ಘಟನೆ ಆತ್ರಾಡಿಯಲ್ಲಿ ಗುರುವಾರ ತಡೆ ರಾತ್ರಿ ನಡೆದಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಡಗಬೆಟ್ಟು ನಿವಾಸಿ ಅಬೂಬಕ್ಕರ್ ಹಲ್ಲೆಗೋಳಗದವರು. ಬೊಮ್ಮರ ಬೆಟ್ಟು ನಿವಾಸಿ ಸಂದೇಶ್ (31), ಸುಶಾಂತ್ (32), ಬಂಧಿತ ಆರೋಪಿಗಳು.

ಅಬೂಬಕ್ಕರ್ ಮದಗ ದಿಂದ ಆತ್ರಾಡಿಗೆ ಬಾಡಿಗೆಗೆ ತೆರಳುತ್ತಿದ್ದ ಸಂದರ್ಭ ಹಿಂದಿನಿಂದ ಮೋಟಾರ್‌ ಸೈಕಲ್‌ ನಲ್ಲಿ ಆರೋಪಿಗಳು ಹಿಂಬಾಲಿಸಿಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದಿದ್ದು, ತಲವಾರು ತೋರಿಸಿ ಬೆದರಿಸಿದ್ದಾರೆ. ಅಪಾಯವನ್ನು ಹರಿತ ರಿಕ್ಷಾ ಚಾಲಕ ಆಟೋ ರಿಕ್ಷಾವನ್ನು ನಿಲ್ಲಿಸಿ ಓಡಲು ಪ್ರತ್ನಿಸಿದಾಗ ಆಗ ಬೈಕ್‌ ನಲ್ಲಿದ್ದ ಒಬ್ಬ ವ್ಯಕ್ತಿ ಕೈಯಲ್ಲಿದ್ದ ತಲವಾರು ಬೀಸಿದರು ತಲವಾರಿನ ಹೊಡೆತದಿಂದ ತಪ್ಪಿಸಿಕೊಂಡಿದ್ದು, ಇನ್ನೊಬ್ಬ ಆಟೋ ರಿಕ್ಷಾದ ಮುಂಬಾಗದ ಗ್ಲಾಸಿಗೆ ಹೊಡೆದಿರುತ್ತಾನೆ. ಈ ಸಂದರ್ಭದಲ್ಲಿ ಅಬೂಬಕರ್ ಅವರು ಪಕ್ಕದಲ್ಲಿದ್ದ ಕಂಪೌಂಡ್‌ ಜಿಗಿದು ಓಡಿ ಹೋಗಿರುತ್ತಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net