ಹಿರೀಸಾವೆಯಲ್ಲಿ ರೈಲುಗಳ ನಿಲುಗಡೆಗೆ ಯತ್ನ

15 Hiri 1
Published on

ಹಿರೀಸಾವೆ: ಪ್ರಯಾಣಿಕರ ಅಗತ್ಯಕ್ಕೆ ಅನುಗುಣವಾಗಿ ಹಿರೀಸಾವೆಯಲ್ಲಿ ರೈಲುಗಳ ನಿಲುಗಡೆ ಮಾಡುವ ಬಗ್ಗೆ ರೈಲ್ವೆ ಸಚಿವರನ್ನು ಭೇಟಿ ಮಾಡಿ, ಮನವಿ ಸಲ್ಲಿಸುವೆ ಎಂದು ಸಂಸದ ಶ್ರೇಯಸ್ ಪಟೇಲ್ ಹೇಳಿದರು.

ಇಲ್ಲಿನ ಗ್ರಾಮದೇವತೆ ಶ್ರೀ ಚೌಡೇಶ್ವರಿ ಹಬ್ಬ ಮತ್ತು ಶ್ರೀ ಬ್ರಹ್ಮೇಶ್ವರ ಸ್ವಾಮಿ ದೇವಸ್ಥಾನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬೆಂಗಳೂರು- ಹಾಸನ ಮಾರ್ಗದ ರೈಲುಗಳ ನಿಲುಗಡೆ ಮತ್ತು ಇತರೆ ಸೌಲಭ್ಯಗಳ ಬಗ್ಗೆ ಸಾರ್ವಜನಿಕರು ಮನವಿ ಮಾಡಿದ್ದಾರೆ. ಈ ಬಗ್ಗೆ ರೈಲ್ವೆ ಇಲಾಖೆ ವಿಭಾಗೀಯ ವ್ಯವಸ್ಥಾಪಕರು ಸೇರಿದಂತೆ ಹಿರಿಯ ಅಧಿಕಾರಿಗಳ ಸಭೆ ನಡೆಸುವೆ. ಶ್ರವಣಬೆಳಗೊಳದಲ್ಲಿ ರೈಲ್ವೆ ಮೇಲ್ಸೇತುವೆ, ಬೀದಿ ದೀಪಗಳು ಹಾಗೂ ಮೂಲ ಸೌಕರ್ಯ ಒದಗಿಸಲು ಗಮನ ಹರಿಸುವೆ ಎಂದರು.

ದೊಡ್ಡ ಕೆರೆ ಏರಿ ಎರಡು ವರ್ಷದ ಹಿಂದೆ ಕುಸಿದಿದೆ, ದುರಸ್ತಿ ಕಾರ್ಯ ಅಗಿಲ್ಲ ಎಂದು ರೈತರು

ಶ್ರೇಯಸ್ ಗಮನಕ್ಕೆ ತಂದರು. ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಕಾಮಗಾರಿ ಮಾಡುವಂತೆ ದೂರವಾಣಿ ಮೂಲಕ ಸೂಚಿಸಿದರು. ಮುಂದಿನ ದಿನಗಳಲ್ಲಿ ಹೋಬಳಿ ಅಥವಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕರು ಮತ್ತು ಅಧಿಕಾರಿಗಳು ಸಭೆ ನಡೆಸಿ,ಸಂಸತ್ ಕ್ಷೇತ್ರದ ಪರಿಮಿತಿಯಲ್ಲಿನ ಸಮಸ್ಯೆಗಳನ್ನು ಬಗೆ ಹರಿಸಲಾಗುವುದು ಎಂದು ಭರವಸೆ ನೀಡಿದರು.

ಮುದ್ರೇಕಲ್ಲು ಆಂಜನೇಯಸ್ವಾಮಿ ಪ್ರತಿಮೆ ನಿರ್ಮಾಣಕ್ಕೆ ಸಹಕಾರ ನೀಡುವಂತೆ ಸಮಿತಿಯ ದೇವರಾಜು, ನಾಗರಾಜು ಮಂಜುನಾಥ್ ಅವರು ಸಂಸದರಿಗೆ ಇದೇ ಸಂದರ್ಭ ಮನವಿ ಸಲ್ಲಿಸಿದರು. ದೇವಸ್ಥಾನದ ಮುಖ್ಯಸ್ಥರಾದ ಫಣೀಶ, ಶಿವಶಂಕರ್, ಗ್ರಾಮ ಪಂಚಾಯಿತಿ ಸದಸ್ಯ ಮಾರುತಿ ಮಂಜುನಾಥ್, ಪಿಎಸಿಸಿ ನಿರ್ದೇಶಕರಾದ ಕೃಷ್ಣೇಗೌಡ, ಹೇಮಂತ, ವಿವಿಧ ಪಕ್ಷಗಳ ಮುಖಂಡರಾದ ಉದಯಕುಮಾರ್, ಶಿವಕುಮಾರ್, ಅಕ್ಷರಗೌಡ, ಪೂರ್ಣಚಂದ್ರ, ರಮೇಶ್, ಯೋಗೇಶ್, ಮಹೇಶ್, ಬಾಬು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net