ಹಿರೇವಂಕಲಕುಂಟಾದಿಂದ ಹುಬ್ಬಳ್ಳಿಗೆ ಬಸ್, ಗ್ರಾಮಸ್ಥರಿರಂದ ಪೂಜೆ ಸಲ್ಲಿಕೆ

Hirevankalakunta to Hubli Bus
ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾದಿಂದ ಹುಬ್ಬಳ್ಳಿಗೆ ಬಸ್ ಸೇವೆ ಆರಂಭಿಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಬಸ್‌ಗೆ ಪೂಜೆ ಸಲ್ಲಿಸಿದರು.
Published on

ಯಲಬುರ್ಗಾ: ಹಿರೇವಂಕಲಕುಂಟಾದಿಂದ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಯಲಬುರ್ಗಾ ಸಾರಿಗೆ ಘಟಕದಿಂದ ಬಸ್ ಸೌಲಭ್ಯ ಪ್ರಾರಂಭಿಸಲಾಗಿದ್ದು, ಗ್ರಾಮಸ್ಥರು ಬಸ್‌ಗೆ ಹೂವಿನ ಹಾರ ಹಾಕಿ ಬುಧವಾರ ಪೂಜೆ ಸಲ್ಲಿಸಿದರು.

ನೂತನ ಬಸ್ ಪ್ರತಿನಿತ್ಯ ಬೆಳಗ್ಗೆ 6 ಗಂಟೆಗೆ ಹಿರೇವಂಕಲಕುಂಟಾದಿಂದ ಪ್ರಯಾಣ ಆರಂಭಿಸಲಿದೆ. ಹಿರೇವಂಕಲಕುಂಟಾದಿಂದ ಬೇವೂರು, ಯಲಬುರ್ಗಾ, ನರೇಗಲ್, ಗದಗ ಮೂಲಕ ಹುಬ್ಬಳ್ಳಿಗೆ ತೆರಳುವ ಬಸ್ ಪುನಃ ಹುಬ್ಬಳ್ಳಿಯಿಂದ ಸಂಜೆ 7 ಗಂಟೆಗೆ ಹೊರಡಲಿದೆ. ಮತ್ತೊಂದು ಬಸ್ ಗಾಣಧಾಳ ಮೂಲಕ ಕನಕಗಿರಿಗೆ ತಲುಪಿ ಅಲ್ಲಿಂದ ಹಿರೇವಡ್ರಕಲ್, ಉಚ್ಚಲಕುಂಟಾ, ಹಿರೇವಂಕಲಕುಂಟಾ ಮೂಲಕ ಮಧ್ಯಾಹ್ನ 1 ಗಂಟೆಗೆ ಹುಬ್ಬಳ್ಳಿಗೆ ತೆರಳಲಿದೆ.

ಈ ಭಾಗದ ಜನರು ಆಸ್ಪತ್ರೆ, ವ್ಯವಹಾರ, ಕಾಲೇಜು ಶಿಕ್ಷಣ ಕೆಲಸಕ್ಕೆ ಗದಗ, ಹುಬ್ಬಳ್ಳಿಗೆ ತೆರಳಲು ಕುಷ್ಟಗಿ ಇಲ್ಲವೇ ಗಜೇಂದ್ರಗಡಕ್ಕೆ ಹೋಗಿ ಅಲ್ಲಿಂದ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಬೇಕಿತ್ತು. ಪಟ್ಟಣ ಸಾರಿಗೆ ಘಟಕ ಹಿರೇವಂಕಲಕುಂಟಾದಿಂದ ಹುಬ್ಬಳ್ಳಿಗೆ ಬಸ್ ವ್ಯವಸ್ಥೆ ಮಾಡಿದ್ದು, ಜನರಿಗೆ ಉಪಯೋಗವಾಗಲಿದೆ.

ಪ್ರಮುಖರಾದ ಮಂಜುನಾಥ ಸಜ್ಜನ, ಹನುಮೇಶ ಚಿಣಗಿ, ಗಣೇಶ ಪೋಪಳೆ, ಹನುಮೇಶ ಭಜಂತ್ರಿ, ವಿರೂಪಾಕ್ಷ ಗಡಾಶೆಟ್ಟರ, ಕಾಸೀಂ ಗುಬ್ಬಿ, ಮಂಜುನಾಥ ಡಗ್ಗಿ, ಪ್ರಕಾಶ ರಾಟಿ, ರವಿ ಭಜಂತ್ರಿ, ಹನುಮೇಶ ಕಂಬಳಿ, ಮುದಿಯಪ್ಪ ಸಜ್ಜನ, ಗಣೇಶ ಸಜ್ಜನ, ಯಮನೂರಪ್ಪ ತರಲಕಟ್ಟಿ ಇತರರಿದ್ದರು.

ಶಾಸಕ ಬಸವರಾಜ ರಾಯರಡ್ಡಿ ಸೂಚನೆ ಮೇರೆಗೆ ಯಲಬುರ್ಗಾ ಸಾರಿಗೆ ಘಟಕದಿಂದ ಹಿರೇವಂಕಲಕುಂಟಾ-ಹುಬ್ಬಳ್ಳಿಗೆ ನೂತನ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಆಸ್ಪತ್ರೆ, ಕಾಲೇಜು ಶಿಕ್ಷಣ, ವ್ಯವಹಾರ ಕಾರ್ಯಗಳಿಗೆ ಹಿರೇವಂಕಲಕುಂಟಾ ಭಾಗದ ಜನತೆಗೆ ಅನುಕೂಲವಾಗಲಿದೆ.| ರಮೇಶ ಚಿಣಗಿ, ಸಾರಿಗೆ ಘಟಕ ವ್ಯವಸ್ಥಾಪಕ, ಯಲಬುರ್ಗಾ ಹಿರೇವಂಕಲಕುಂಟಾ ಭಾಗದ ಜನರು ಗದಗ, ಹುಬ್ಬಳ್ಳಿಗೆ ತೆರಳಲು ಸಮಸ್ಯೆ ಎದುರಿಸುತ್ತಿದ್ದರು. ಹಿರೇವಂಕಲಕುಂಟಾದಿಂದ ಹುಬ್ಬಳ್ಳಿಗೆ ಬಸ್ ವ್ಯವಸ್ಥೆ ಕಲ್ಪಿಸಿದ್ದು, ತುಂಬಾ ಅನುಕೂಲವಾಗಿದೆ. ಈ ಭಾಗದ ಜನ ಸದುಪಯೋಗ ಪಡೆದುಕೊಳ್ಳಬೇಕು.| ದೇವೇಂದ್ರಪ್ಪ ಜಿರ್ಲಿ, ವಿರೂಪಾಕ್ಷ ಗಡಾಶೆಟ್ಟರ, ಮಂಜುನಾಥ ಸಜ್ಜನ, ಗ್ರಾಮಸ್ಥರು, ಹಿರೇವಂಕಲಕುಂಟಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net