ಹಿರೇಮ್ಯಾಗೇರಿ, ಸಂಕನೂರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಶೇ.83.56 ಮತದಾನ

Hiremayegeri Grama panchayat Election Voting
ಯಲಬುರ್ಗಾ ತಾಲೂಕಿನ ಹಿರೇಮ್ಯಾಗೇರಿಯ ಮತಗಟ್ಟೆ ಕೇಂದ್ರದಲ್ಲಿ ಮತ ಚಲಾಯಿಸಲು ಪರಸ್ಪರ ಅಂತರ ಕಾಯ್ದುಕೊಂಡು ಸರತಿ ಸಾಲಿನಲ್ಲಿ ನಿಂತಿರುವ ಮತದಾರರು.
Published on

ಯಲಬುರ್ಗಾ: ತಾಲೂಕಿನ ಹಿರೇಮ್ಯಾಗೇರಿ ಹಾಗೂ ಸಂಕನೂರು ಗ್ರಾಪಂಗಳಿಗೆ ಸೋಮವಾರ ಶಾಂತಿಯುತ ಮತದಾನ ನಡೆಯಿತು.

ಬೆಳಗ್ಗೆ 7 ಗಂಟೆಗೆ ಪ್ರಾರಂಭವಾದ ಮತದಾನ ಸಂಜೆವರೆಗೂ ನಡೆಯಿತು. ವಯೋವೃದ್ಧರನ್ನು ಅಭ್ಯರ್ಥಿಗಳ ಬೆಂಬಲಿಗರು ಬೈಕ್ ಹಾಗೂ ವ್ಹೀಲ್‌ಚೇರ್‌ನಲ್ಲಿ ಕರೆತಂದು ಮತದಾನ ಮಾಡಿಸಿದರು. ಈ ವೇಳೆ ಅಭ್ಯರ್ಥಿಗಳು, ಬೆಂಬಲಿಗರು ತಮ್ಮ ಮಾದರಿ ಮತ ಪತ್ರದ ಗುರುತನ್ನು ಮತದಾರರಿಗೆ ತೋರಿಸಿ ಮತ ಹಾಕುವಂತೆ ಕೈಮುಗಿದು ಮನವಿ ಮಾಡುತ್ತಿರುವ ದೃಶ್ಯ ಕಂಡು ಬಂತು. ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಹುಮ್ಮಸ್ಸಿನಿಂದ ಪಾಲ್ಗೊಂಡಿರುವುದು ವಿಶೇಷವಾಗಿತ್ತು. ಉದ್ಯೋಗ ಅರಸಿ ಅನ್ಯರಾಜ್ಯ, ನಗರ ಪ್ರದೇಶಗಳಿಗೆ ತೆರಳಿದ್ದ ವಲಸಿಗರನ್ನು ಗ್ರಾಪಂ ಚುನಾವಣೆ ನಿಮಿತ್ತ ಅಭ್ಯರ್ಥಿಗಳ ಬೆಂಬಲಿಗರು ಕರೆ ತಂದು ಮತದಾನ ಮಾಡಿಸಿದರು. ಶೇ.83.56 ಮತದಾನವಾಗಿದೆ.

ಆಶಾ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿ ಮತ ಹಾಕಲು ಬರುವ ಮತದಾರರಿಗೆ ಸ್ಯಾನಿಟೈಸರ್, ಥರ್ಮಲ್ ಸ್ಕೀನಿಂಗ್ ತಪಾಸಣೆ ಮಾಡಿ ವೋಟ್ ಮಾಡಲು ಮತಗಟ್ಟೆಗೆ ಕಳುಹಿಸುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net